Chamundi Thaaye Neenu

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ

ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ

ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ
ಚಂಡ ಮುಂಡ ಅಸುರರನ್ನು ಕೊಂದವಳೇ ತಾಯಿ
ತಲೆಬಾಗಿ ಬೇಡಲು ಸ್ಥಿರವಾಗಿ ಪೊರೆದವಳೇ

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ

ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ

ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ
ದುಷ್ಟರನ್ನು ದಮನಿಸಿ, ಶಿಷ್ಟರನ್ನು ಪೊರೆದವಳೇ
ಕಷ್ಟದಲ್ಲಿ ಕಾಯುವಂತಹ ತಾಯೇ, ಚಾಮುಂಡಿಯೇ

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ



Credits
Writer(s): Jayashree Aravind
Lyrics powered by www.musixmatch.com

Link