Anugaala Beduvenayya

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ
ನಿನ ಸೇವೆ ಒಂದೇ ಉಸಿರಾಗಿದೆ
ಮಾದೇವ ನಾಮವೇ ಬದುಕಾಗಿದೆ
ಮುಕುತಿ ನೀಡೋ ಮಾದೇವ

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ

ಬಾಳಲ್ಲಿ ನೋವು ನೂರು ಮಡುವಾಗಿದೆ
ಕಣ್ಣೀರ ಕೋಡಿ ಹರಿದು ಕಡಲಾಗಿದೆ, ಅಯ್ಯೋ
ಸಿರಿತನವನೆಂದು ಕೇಳೇ ಮಾದೇಶ್ವರ
ಬಡತನದ ಬೇಗೆ ತಾಳೆ ಗಂಗಾಧರ
ಮನೆದೇವ ಮಾದೇಶ್ವರನೇ ಮೊರೆ ಕೇಳೆಯ
ಮನೆದೇವ ಮಾದೇಶ್ವರನೇ ಮೊರೆ ಕೇಳೆಯ
ಮೊರೆ ಕೇಳಿ ನೀನೊಂದು ಮಾತಾಡೇಯ

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ

ನಾಲಗೆಯು ನಿನ್ನ ನಾಮ ಕೊಂಡಾಡಿದೆ
ಎದೆಯಲ್ಲಿ ನಿನ್ನ ನೇಮ ಎಲೆಯಾಗಿದೆ
ಅಳಿದೋರು ಈ ದೇಹ ನಿನ್ನ ನೆನದಿದೆ
ಕೊನೆವರೆಗೂ ನಿನ್ನ ಹೆಸರೇ ಉಸಿರಾಗಿದೆ
ಕಣ್ಣೀರಲೇ ತೊಳೆವೆ ನಿನ ಪಾದವ
ಕಣ್ಣೀರಲೇ ತೊಳೆವೆ ನಿನ ಪಾದವ
ಶಿರ ನಿನ್ನ ಚರಣದಲಿಡುವೆ ಕಾಪಾಡೆಯ

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ

ಹಗಳಿರಲಿ ಇರುಳೆ ಇರಲಿ ನಿನ್ನ ಧ್ಯಾನವೇ
ಒಡಲಾಳದಲ್ಲೂ ನಿನ್ನ ಗುಣಗಾನವೇ
ಮರುಜನ್ಮವಿದ್ದರೆ ನನಗೆ ಒಂದಾಸೆಯೂ
ಪ್ರತಿಜನ್ಮದಲ್ಲೂ ನಿನ್ನ ದಾಸನಾಗಿಸು
ನಿನ್ನ ಮಹಿಮೆ ಹಾಡೋದೊಂದೆ ನನಗಾಸರೆ, ಸ್ವಾಮಿ
ನಿನ್ನ ಮಹಿಮೆ ಹಾಡೋದೊಂದೆ ನನಗಾಸರೆ
ಬಿಡಿಸಯ್ಯ ಮಾದೇಶ್ವರನೇ ಭವದಾಸರೇ

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ
ನಿನ ಸೇವೆ ಒಂದೇ ಉಸಿರಾಗಿದೆ
ಮಾದೇವ ನಾಮವೇ ಬದುಕಾಗಿದೆ
ಮುಕುತಿ ನೀಡೋ ಮಾದೇವ

ಅನುಗಾಲ ಬೇಡುವೆನಯ್ಯ ನಿನ ಪಾದವ
ನಿನಗಾಗೇ ಸವೆಸುವೆನಯ್ಯ ಈ ಜೀವವ



Credits
Writer(s): Ravi Kumar-mahendar
Lyrics powered by www.musixmatch.com

Link