Ninnalu Nannalu

ನಿನ್ನಲ್ಲೂ ನನ್ನಲ್ಲೂ ನನ್ನಲ್ಲೂ ನಿನ್ನಲ್ಲೂ ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು ಒಂದೇ ಎದೆ ಬಡಿತ

ನಿನ್ನಲ್ಲೂ ನನ್ನಲ್ಲೂ ನನ್ನಲ್ಲೂ ನಿನ್ನಲ್ಲೂ ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು ಒಂದೇ ಎದೆ ಬಡಿತ
ಈ ತಕಧಿಮಿತ ತಕತಕ ಧಿಮಿತ
ತಗೋ ಹೇಳುತಿದೆ ನೀ ನನ್ನ ಸ್ವಂತ
ಈ ಜೀವವನೇ ಜೀವನವನ್ನೇ ನಾ ಬರೆದಿಡುವೆ ಎಂದೂ ನಿನಗಂತ
ನೀನಿಲ್ಲದೆ ನಾನಿಲ್ಲ ಕಣೇ

ನಿನ್ನಲ್ಲೂ ನನ್ನಲ್ಲೂ ನನ್ನಲ್ಲೂ ನಿನ್ನಲ್ಲೂ ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು ಒಂದೇ ಎದೆ ಬಡಿತ

ನಾ ನಿನ್ನ ಕಣ್ಣಿಗೆ ನೀ ನನ್ನ ಕಣ್ಣಿಗೆ ಸೋತಿದ್ದು ಯಾಕೆ ಗೊತ್ತೇನು
ಗೊತ್ತಿಲ್ಲದಂತೆ ಸೋಲೋಕೆ ತಾನೇ ಮೆಚ್ಚೋದು ಎಲ್ಲರೂ ಕಣ್ಣನ್ನು
ಅಂತೂ ಇಂತೂ ಪ್ರೀತಿಯಂತು ಶುರುವಾಗಿ
ಸುತ್ತಿ ಬಂತು ಲೋಕವೆಲ್ಲ ಸುಖವಾಗಿ
ಪ್ರಾಣವೇ ಹೋದರೂ ನಿನಗಾಗಿ
ತಕ್ಷಣ ಹುಟ್ಟಿ ಬರುವೆ ನಿಜವಾಗಿ
ನಿನ್ನ ಪ್ರೀತಿ ಸೊಬಗಿನ ದೃಶ್ಯದಲಿ ಅದೃಶ್ಯವಾಗಿ ಬಿಡುವೆ ಅಲೆಯಾಗಿ

ನಿನ್ನಲ್ಲೂ ನನ್ನಲ್ಲೂ
ನನ್ನಲ್ಲೂ ನಿನ್ನಲ್ಲೂ
ಒಂದೇ ಉಸಿರಾಟ
ಹಗಲು ಇರುಳು
ಇರುಳು ಹಗಲು
ಒಂದೇ ಎದೆ ಬಡಿತ

ಎಷ್ಟೊಂದು ಮಾತು ಎಷ್ಟೊಂದು ಕಾತರ
ಎಷ್ಟೊಂದು ಕನಸು ಪ್ರೀತಿಯಲಿ
ಅಷ್ಟೊಂದು ಇದ್ದರೂ ಪ್ರೇಮಿಗಳು ಪ್ರೀತಿಯ ಹೇಳೋದು ಒಂದೇ ರೀತಿಯಲಿ
ನಾನು ನಿನ್ನ ಮನಸಾರೆ ಪ್ರೀತಿಸುವೆ
ನಾನು ಕೂಡ ಹಂಗೇನೆ ಪ್ರೀತಿಸುವೆ
ಆದರೂ ಪ್ರೀತಿಯ ಹೇಳೋಕೆ
ಹೊಸ ಹೆದರಿಕೆಗಳು ಇಲ್ಲಿ ತಡೆಯುತ್ತಿದೆ
ಹಂಗಾದರೂ ನಮ್ಮ ಹೃದಯಗಳು
ಏನು ಬೇಕು ಅದನ್ನೇ ಪಡೆಯುತಿದೆ

ನಿನ್ನಲ್ಲೂ ನನ್ನಲ್ಲೂ ನನ್ನಲ್ಲೂ ನಿನ್ನಲ್ಲೂ ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು ಒಂದೇ ಎದೆ ಬಡಿತ
ಈ ತಕಧಿಮಿತ
ತಕತಕ ಧಿಮಿತ
ತಗೋ ಹೇಳುತಿದೆ
ನೀ ನನ್ನ ಸ್ವಂತ
ಜೀವವನೇ ಜೀವನವನ್ನೇ
ನಾ ಬರೆದಿಡುವೆ
ಎಂದೂ ನಿನಗಂತ
ನೀನಿಲ್ಲದೆ ನಾನಿಲ್ಲ ಕಣೋ

ನಿನ್ನಲ್ಲೂ ನನ್ನಲ್ಲೂ ನನ್ನಲ್ಲೂ ನಿನ್ನಲ್ಲೂ ಒಂದೇ ಉಸಿರಾಟ
ಹಗಲು ಇರುಳು ಇರುಳು ಹಗಲು ಒಂದೇ ಎದೆ ಬಡಿತ



Credits
Writer(s): K. Kalyan
Lyrics powered by www.musixmatch.com

Link