Ninna Gungalli (feat. Puja Purad)

ಕೇಳದೇ ಬಂದೇ ನೀನು
ಹೇಳದೇ ನನ್ನ ಮನಸಲ್ಲಿ
ಕಣ್ಣಿಗೆ ಕಾಣದಾ ಈ ಪ್ರೀತಿ ಎಂಬ ರಂಗು ಚೆಲ್ಲಿ
ಕಾಣದೆ ಹೋದೆ ಎಲ್ಲಿ, ಕಾಡಿದೆ ನಿನ್ನ ನೆನಪಿಲ್ಲಿ
ಯಾರನ್ನೇ ಕಂಡರೂ ನಿನ್ನೇ ಕಾಣುವೆ ಅಲ್ಲಿ
ಹುಡುಕೋ ದಾರಿ ನಿನ್ನಲಿ ಸೇರಿ, ನೀ ಸಿಕ್ಕರೇ ಸಾಕು
ಬೇಡುವೆ ಸಾರಿ ಭಯವ ಮೀರಿ ನಿನ್ನ ಒಲವೇ ಬೇಕು
ಪ್ರೀತಿಯ ತೋರಿ ಒಮ್ಮೆಲೇ ಜಾರಿ ಎಲ್ಲಿಗೆ ಹೋದೇ ನೀನು ಪ್ರತಿಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ, ಕಾದು ಕುಂತೆ ನಾ
ಕಾದು ಕುಂತೆ ನಾ, ಕೊರಗಿ ಸೋತೆ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ

ಏನಾದರೂ ನೂರು, ಹುಡುಕಾಡುತ ಸೇರುವೆನು
ಇರಲಾರೆನು ನಾ ಇನ್ನೆಂದೂ ನಿನ್ನ ಮರೆತು
ನಡೆದ ದಾರಿಯ ತುಂಬ, ನಿನ್ನದೇ ಹೆಜ್ಜೆಯ ಗುರುತು
ಕುಂತ ಜಾಗವೆಲ್ಲಾ ಕೇಳಿವೆ ನಿನ್ನನೇ ಕುರಿತು
ನಿನ್ನ ಹುಡುಕಲು ಕೈ ಚಾಚಿ ಹೆಸರ ಎಲ್ಲೆಡೆ ಗೀಚಿ
ಮಾಯವಾದೇ ನೀನು ಈಗ ನನ್ನ ಪ್ರೀತಿಯ ದೋಚಿ
ಇಬ್ಬನಿಯಂತೆ ಕಂಬನಿ ಸುರಿಸಿ, ಕಾಯುವೆ ನಾ ನಿನ್ನರಸಿ
ಪ್ರತಿ ಉಸಿರಲ್ಲೂ ನಾ

ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ
ಕಾದು ಕುಂತೇ ನಾ
ಕಾದು ಕುಂತೇ ನಾ
ಕೊರಗಿ ಸೋತೇ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ

ನಿನ್ನ ಗುಂಗಲ್ಲೇ



Credits
Writer(s): Adhvik
Lyrics powered by www.musixmatch.com

Link