Amma

ನೀ ನನ್ನ ಕಣ್ಣಲೇ ಹರಸಿದೆ
ನನ್ನ ಬಾನೆತ್ತರ ಬೆಳೆಸಿದೆ

ನೀ ನನ್ನ ಕಣ್ಣಲೇ ಹರಸಿದೆ
ನನ್ನ ಬಾನೆತ್ತರ ಬೆಳೆಸಿದೆ
ಕಲ್ಪನೆಗಳಾಚೆಗೆ ಸೆಳೆದು, ಕಂಬನಿಗಳಿಗೆ ಕೊಡೆ ಹಿಡಿದು
ಕಲ್ಪನೆಗಳಾಚೆಗೆ ಸೆಳೆದು, ಕಂಬನಿಗಳಿಗೆ ಕೊಡೆ ಹಿಡಿದು
ಅಂದು ನೀ ಕಂಡ ಕನಸು ನಾನಲ್ಲವೇ
ಅಮ್ಮ
ಅಮ್ಮ
ಅಮ್ಮ

ಮೊದಲ ನೋಟದ ಅರಿವೇ ಇಲ್ಲ
ಎಡವಿದಾಗ ನಡೆಸಿದೆ ಮೆಲ್ಲ

ತುಂಬು ಪ್ರೀತಿಯ ಚಿಲುಮೆಯ ಹರಿಸಿ
ನನ್ನ ಮುಖದಲಿ ನಗುವನು ತರಿಸಿ
ಆಸೆಗಳಿಗೆ ನೀರೆರೆದೂ, ನೋವುಗಳ ತಡೆಹಿಡಿದು
ಸೋಲುಗಳಲಿ ಜೊತೆ ನಿಂತೂ
ಗುರಿಯೆಡೆಗೆ ಕೈ ಹಿಡಿದು
ನಿನ್ನ ಈ ಅಕ್ಕರೆಯ ಸಿಹಿ ಇನ್ನೆಲ್ಲಿದೇ
ಅಮ್ಮ
ಅಮ್ಮ
ಅಮ್ಮ

ನೀ ನನ್ನ ಬಾಳನು ಬೆಳಗಿದೆ
ನನ್ನ ಬಾನೆತ್ತರ ಬೆಳೆಸಿದೆ
ಅಮ್ಮ
ಅಮ್ಮ
ಅಮ್ಮ
ಅಮ್ಮ
ಅಮ್ಮ
ಅಮ್ಮ



Credits
Writer(s): Pratap Bhat, Vasu Dixit
Lyrics powered by www.musixmatch.com

Link