Halli Laavaniyali Laali

ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ
ಹೂ ನಲಿವುದು
ನೀ ನುಡಿದರೆ
ಕಾವ್ಯಾ ಸುರಿವುದು
ಅರೆ ಅಹ್ ಆ ಆ ಆ

ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
(ಅನುಮತಿಯ ನೀಡುವೆಯಾ ಕಲ್ಯಾಣಿ ಕಲ್ಯಾಣಿ)
ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ
(ನಿನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ)
ಹಾಲು ಹಂಸೆ ಹೇಳುತಾವೆ
ನಿನ್ನ ನಡೆಯೇ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ
ನಿನ್ನ ತಳುಕೆ ಸ್ಪೂರ್ತಿ
ಆ ತಾರೆ, ಸಂಸಾರ, ಶೃಂಗಾರ ಬೇಡುತ್ತಾ ಕಾದಿತ್ತು ಆ ಬಾನಲ್ಲಿ

ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ
ಹೂ ನಲಿವುದು
ನೀ ನುಡಿದರೆ
ಕಾವ್ಯಾ ಸುರಿವುದು
ಅರೆ ಅಹ್ ಅ ಅ ಅ ಆ

ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

ಬೀಸೋ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
(ನಿನ ವಯಸ್ಸೇ ತಂಪಿನಲೂ ಬಲುತಂಪು ಬಲುತಂಪು)
ಹರಿಯೋ ನೀರೆಲ್ಲಾ ನಿನ ಗೆಜ್ಜೆ ನಾದ ವರವಾಯ್ತು ಅಂತು
(ನೀ ಕೊಡುವ ಕಲರವವೆ ಕಿವಿಗಿಂಪು ಕಿವಿಗಿಂಪು)
ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು ನಿನ್ನ ಹೆಸರೇ ಸ್ಪೂರ್ತಿ
ಈ ನಿನ್ನ ವಯ್ಯಾರ ನೋಡುತ್ತಾ ಹಾಡಿತ್ತು ಮಂದಾರ ಈ ಊರಲ್ಲಿ

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ
ಹೂ ನಲಿವುದು
ನೀ ನುಡಿದರೆ
ಕಾವ್ಯಾ ಸುರಿವುದು
ಅರೆ ಅಹ್ ಅ ಅ ಅ ಆ

ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ



Credits
Writer(s): Ilayaraja, K. Kalyan
Lyrics powered by www.musixmatch.com

Link