Kelisade Kallukallinali (From "Belli Kalungura")

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ, ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ, ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ, ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ, ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಭೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೆರೇರಿ ಮೂಡಣವೆ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕರೆನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ, ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ, ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು

ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ ಕಾದಿವೆ
ನೀನಿರೆ ರಂಗೋಲಿ
ಸಂಗಾತಿ ಸುವ್ವಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲ ಬೆಳಕನ್ನು ನೀಡು

ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ, ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ, ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ, ಕನ್ನಡ ನುಡಿ



Credits
Writer(s): Hamsalekha
Lyrics powered by www.musixmatch.com

Link