Jeeva Jaari

ಜೀವ ಜಾರಿ, ಮರೆತು ದಾರಿ ನಿನ್ನ ಕಡೆಗೆ ಸವಾರಿ
ಭಾವ ಮೀರಿ, ಬಯಕೆ ತೋರಿ ಆದೆ ಒಲವ ರೂವಾರಿ
ನಶೆಯ ಮಿಂಚಿ ಪೀಠಿಕೆ, ಖುಷಿಯ ಮಳೆಯ ವೇದಿಕೆ
ಭಾನು-ಭೂಮಿ ಸೇರೋಕೆ

ಜೀವ ಜಾರಿ, ಮರೆತು ದಾರಿ ನಿನ್ನ ಕಡೆಗೆ ಸವಾರಿ

ಸಂದೇಹವಿಲ್ಲ ಸೆರೆಯಾದೆ ನಾ, ಸಂಕೋಚದಲ್ಲಿ ನನ್ನ ಮನ
ಎಲ್ಲಿದ್ದೆ ನೀನು ಇಷ್ಟು ದಿನ? ನಿನ್ನಲ್ಲೇ ಇತ್ತಾ ನನ್ನ ಋಣ?
ಯಾರೋ ನೀನು, ಯಾರೋ ನಾನು, ಹೇಗೆ ಸೆಳೆದೆ ನೀ ನನ್ನನು?

ಮುಂಗಾರು ಆದೆ ಮರುಭೂಮಿಗೆ, ತಂಗಾಳಿಯಾದೆ ಸುಡುಬೇಗಿಗೆ
ಕನಸೀಗ ನಿನದೆ ನಾನಾಬಗೆ, ಸೇರೋಕೆ ಆಸೆ ನಿನ್ನ ತೋಳಿಗೆ
ಯಾರೋ ನೀನು, ಯಾರೋ ನಾನು, ಹೇಗೆ ಸೆಳೆದೆ ನೀ ನನ್ನನು?

ಜೀವ ಜಾರಿ, ಮರೆತು ದಾರಿ ನಿನ್ನ ಕಡೆಗೆ ಸವಾರಿ



Credits
Writer(s): Ghouse Peer, Neel A M
Lyrics powered by www.musixmatch.com

Link