Lahari

ಲಹರಿ, ಮೋಹ ಲಹರಿ, ನನ್ನ ಮನವ ಸವರಿ
ಮೌನ ಮುರಿದಾಗಿದೆ, ಮಾತು ಬರದಾಗಿದೆ
ಹೇಳು, ಬರಲೇನು ನಿನ್ನೊಂದಿಗೆ?
ಮೌನ ಮುರಿದಾಗಿದೆ, ಮಾತು ಬರದಾಗಿದೆ
ಹೇಳು, ಬರಲೇನು ನಿನ್ನೊಂದಿಗೆ?

ಲಹರಿ, ಭಾವ ಲಹರಿ, ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ, ನೋಟ ಸೆರೆಯಾಗಿದೆ
ಹೇಳು, ಇರಲೇನು ನಿನ್ನೊಂದಿಗೆ?
ಲೋಕ ಮರೆಯಾಗಿದೆ, ನೋಟ ಸೆರೆಯಾಗಿದೆ
ಹೇಳು, ಇರಲೇನು ನಿನ್ನೊಂದಿಗೆ?

ಲಹರಿ, ಮೋಹ ಲಹರಿ

Hmm-mm, hmm-mm, hmm-mm, hmm-mm
Hmm-mm, hmm-mm, hmm-mm, hmm-mm

ಆ-ಆ, ಆ-ಆ, ಆ-ಆ, ಆ-ಆ, ಆ, ಆ, ಆ-ಆ
ಆ-ಆ, ಆ-ಆ, ಆ-ಆ, ಆ-ಆ, ಆ, ಆ, ಆ-ಆ

ಒಂದೇ ಒಂದು ಸಲ ನೀನು ಸೋಕಿದರೆ ನಾನು ಪುಲಕಗಳ ಸಂಕಲನ
ಅನ್ನಲಾಗದ ಮನದ ಮಾತುಗಳ ಕಣ್ಣ ನೋಟದಲೇ ಸಂಚಲನ
ಅಂದ ಹಾಗೆ ನೀ ಅಂದವಾಗಿಯೇ ಚಂದಗಾಣಿಸು ಸಮ್ಮಿಲನ
ಚಂದ್ರ ಬಂದಾಗಿದೆ, ಎಲ್ಲ ಅಂದಾಗಿದೆ, ನೀ ನಡೆದಿರಲು ನನ್ನೊಂದಿಗೆ

ಲಹರಿ, ಮೋಹ ಲಹರಿ, ನನ್ನ ಮನವ ಸವರಿ
ಮೌನ ಮುರಿದಾಗಿದೆ, ಮಾತು ಬರದಾಗಿದೆ
ಹೇಳು, ಬರಲೇನು ನಿನ್ನೊಂದಿಗೆ?
ಮೌನ ಮುರಿದಾಗಿದೆ, ಮಾತು ಬರದಾಗಿದೆ
ಹೇಳು, ಬರಲೇನು ನಿನ್ನೊಂದಿಗೆ?

ನಿನ್ನ ಕಿರುನಗೆಯ ಸಣ್ಣ ದೀಪಗಳೇ ದಾರಿ ತೋರುತಿವೆ ಸಂಗಾತ
ಮತ್ತೆ-ಮತ್ತೆ ನೀ ನನ್ನ ಕೂಗಿದರೆ ನನ್ನ ಪಾಲಿಗದೇ ಸಂಗೀತ
ನೋವು-ನಲಿವುಗಳ ಲೆಕ್ಕ ಮೀರುವುದೇ ಜೀವದೊಲುಮೆಯ ಸಂಕೇತ
ನಲ್ಮೆಹಸನಾಗಿದೆ, ನಾಳೆ ಹೊಸದಾಗಿದೆ, ನನ್ನ ಮರುಜನುಮ ನಿನ್ನೊಂದಿಗೆ

ಲಹರಿ, ಭಾವ ಲಹರಿ, ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ, ನೋಟ ಸೆರೆಯಾಗಿದೆ
ಹೇಳು, ಇರಲೇನು ನಿನ್ನೊಂದಿಗೆ?
ಲೋಕ ಮರೆಯಾಗಿದೆ, ನೋಟ ಸೆರೆಯಾಗಿದೆ
ಹೇಳು, ಇರಲೇನು ನಿನ್ನೊಂದಿಗೆ?

ಲಹರಿ (ಆ-ಆ, ಆ-ಆ-ಆ)



Credits
Writer(s): Jayanth Kaikini, Mano Murthy
Lyrics powered by www.musixmatch.com

Link