Chinna Hele Hegiruve

ಚಿನ್ನ, ಹೇಳೇ, ಹೇಗಿರುವೆ? ಕಣ್ಣಿನಲ್ಲೇ ಹಾಡಿರುವೆ
ಚಿನ್ನ, ಹೇಳೇ, ಹೇಗಿರುವೆ? ಕಣ್ಣಿನಲ್ಲೇ ಹಾಡಿರುವೆ
ನಿನ್ನದೊಂದು ನೋಟಕೆ ನಾ ಓಡುತಲೆ ಬಂದಿರುವೆ
ಇನ್ನು ನಾನು ನಿನ್ನವನು, ನಿನ್ನವನೇ ಎಂದಿರುವೆ

ಚಿನ್ನ, ನೋಡು, ಹೀಗಿರುವೆ, ನಿನ್ನದಾಗಿ ಹೋಗಿರುವೆ
ಚಿನ್ನ, ನೋಡು, ಹೀಗಿರುವೆ, ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ ಕಾಯುತಲೇ ನಿಂತಿರುವೆ
ಇನ್ನು ನೀನೇ ನನ್ನವನು, ನನ್ನವನೇ ಎಂದಿರುವೆ

ಚಿನ್ನ, ಹೇಳೇ, ಹೇಗಿರುವೆ?

ಈ ಹೃದಯ ಮಾಡಿದೆ ಹೊಸ ಸಾಹಸ
ಬೇಕಾಗಿದೆ ಅನುಮೋದನೆ
ಮಿರಿ ಮಿಂಚು ಮೂಡಿದ ಕಣ್ಣಿಂದಲೇ
ಮರೆತೆಲ್ಲವ, ಬರೀ ನೋಡು ನನ್ನನ್ನೇ
ಬೇರೆ ಮಾತು ಬೇಕಿಲ್ಲ, ಇನ್ನು ದೂರ ಸಾಕಲ್ಲ?
ನೀನೇ ಪೂರಾ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಓ, ಇನ್ನು ನೀನೇ ನನ್ನವನು, ನನ್ನವನೇ ಎಂದಿರುವೆ

ಚಿನ್ನ, ನೋಡು, ಹೀಗಿರುವೆ, ನಿನ್ನದಾಗಿ ಹೋಗಿರುವೆ
ಚಿನ್ನ, ಹೇಳೇ, ಹೇಗಿರುವೆ?

ಮೊಗದಲ್ಲಿ ಕೆಂಪಿನ ಚಿತ್ತಾರವ
ಉಸಿರಿಂದಲೇ ನಾ ಬಿಡಿಸಲೇ?
ಈ ನಮ್ಮ ಜೀವನದ ರೇಖೆಯು
ಒಂದಾಯಿತೇ ಹಿಡಿದಂಥ ಕೈಯಲ್ಲಿ
ಭಾವಲೋಕ ಬಂತಲ್ಲ, ನಿನ್ನ ಬಿಟ್ಟು ಏನಿಲ್ಲ
ನೀನು ಕೊಟ್ಟೆ ಏನೆಲ್ಲ
ನನ್ನವೆಲ್ಲ ನಾಳೆಗಳ ನಿನಗಾಗಿ ತಂದಿರುವೆ
ಇನ್ನು ನಾನು ನಿನ್ನವನು, ನಿನ್ನವನೇ ಎಂದಿರುವೆ

ಚಿನ್ನ, ಹೇಳೇ, ಹೇಗಿರುವೆ? ಕಣ್ಣಿನಲ್ಲೇ ಹಾಡಿರುವೆ
ಚಿನ್ನ, ನೋಡು, ಹೀಗಿರುವೆ, ನಿನ್ನದಾಗಿ ಹೋಗಿರುವೆ
ನಿನ್ನದೊಂದು ನೋಟಕೆ ನಾ ಓಡುತಲೆ ಬಂದಿರುವೆ
ಇನ್ನು ನೀನೇ ನನ್ನವನು, ನನ್ನವನೇ ಎಂದಿರುವೆ
ಚಿನ್ನ, ಹೇಳೇ, ಹೇಗಿರುವೆ?

Credits
Writer(s): Jayanth Kaikini, Mano Murthy
Lyrics powered by www.musixmatch.com

Link