Chiguru Bombeye

ಚಿಗುರು ಬೊಂಬೆಯೇ ನವಿರು ಗೊಂಬೆಯೇ
ನೀ ದಂತ ತೀಡಿದಂಥ ಬೊಂಬೆಯೇ
ಚಿಗುರು ಗೊಂಬೆಯೇ ನವಿರು ಬೊಂಬೆಯೇ
ವಸಂತ ಕೊರೆದ ಸ್ವಂತ ಬೊಂಬೆಯೇ
ನಾಚಿಕೆ, ನಿನ್ನ ಬಣ್ಣವೇ
ಕುತೂಹಲ, ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ

ಚಿಗುರು ಗೊಂಬೆಯೇ ನವಿರು ಬೊಂಬೆಯೇ
ನೀ ದಂತ ತೀಡಿದಂಥ ಬೊಂಬೆಯೇ

ಓ, ಈ ಕ್ಷಣವು ಮರುಕ್ಷಣವೂ ಪ್ರತಿಕ್ಷಣವಿರಲಿ
ಪ್ರತಿನಾಳೆಯ ಪ್ರತಿ ಕನಸು ಪ್ರತಿಫಲಿಸಲಿ
ನೀನೊಂದು ಸಿಹಿ ಪುತ್ಥಳಿ ಬೊಂಬೆ ಕಣೇ

ಕೈ ಹಿಡಿಯೋ ಕಲೆಗಾರನ ಅಂಗೈಯೊಳಗೆ
ನೀ ಸ್ಪರ್ಶ ಮಣಿಯಾಗೋ ದಿನಪ್ರತಿ ಘಳಿಗೆ
ನೀನೊಂದು ಸಂಜೀವಿನಿ ಬೊಂಬೆ ಕಣೆ
ಹಣೆಯ ಮನೆಯಲೇ
ಹಸಿಯ ಮಣೆಯಿದೆ
ಮಧುಸುರಿವಾ ಮಧುಮಗಳೇ
ಪ್ರತಿ ಇರುಳು ಮೊದಲಿರುಳೇ

ಚಿಗುರು ಬೊಂಬೆಯೇ ನವಿರು ಬೊಂಬೆಯೇ
ನೀ ದಂತ ತೀಡಿದಂಥ ಬೊಂಬೆಯೇ

ಓ ನಿನ್ನಂದ ನಿನಗೆ ಮಾತ್ರ ನಿನ್ನೆ ವರೆಗೆ
ನಿನ ಹೃದಯ ನಿನ್ನೊಳಗೆ ಇದ್ದರೆ ಹೇಗೆ
ಅರ್ಧಾಂಗಿಗೂ ಅರ್ಧ ಸಿಗಬೇಕಿದೆ

ನಿನ್ನುಸಿರು ಬರಿಗಾಳಿಗೆ ಬೆರೆತರೆ ಹೇಗೆ
ನಿನ್ಹೆಸರಿಗೆ ಹೆಸರೊಂದು ಬರೆದುಕೋ ಹೀಗೆ
ಹೆಸರುಸಿರಲು ಸಂಗಾತಿಗೆ ಪಾಲು ಇದೆ
ಗಾಳಿ ನೀರಿಗೂ
ತಾಳಿನಂಟಿದೆ
ಹೊಸ ಬಾಳು ಹೊಸ ಬೆಳಕು
ನಿನ್ನೊಳಗೆ ನಗಬೇಕು

ಚಿಗುರು ಗೊಂಬೆಯೇ ನವಿರು ಬೊಂಬೆಯೇ
ನೀ ದಂತ ತೀಡಿದಂಥ ಬೊಂಬೆಯೇ
ಚಿಗುರು ಬೊಂಬೆಯೇ ನವಿರು ಬೊಂಬೆಯೇ
ವಸಂತ ಕೊರೆದ ಸ್ವಂತ ಬೊಂಬೆಯೇ
ನಾಚಿಕೆ, ನಿನ್ನ ಬಣ್ಣವೇ
ಕುತೂಹಲ, ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ



Credits
Writer(s): K. Kalyan
Lyrics powered by www.musixmatch.com

Link