Honnantha Naadu

ಹೊನ್ನಂಥ ನಾಡು, ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು

ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಕನ್ನಡದ ಹೊನ್ನುಡಿಯು ಕಸ್ತೂರಿ ತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಇಂದು ಸೊಗಸು ಹಾಡಲು

ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು

ಬೆಲ್ಲಕ್ಕಿಂತ ಸಿಹಿಯು ಮಾತು
ನಗುತಲೀ ನೀನು ನುಡಿದರೆ
ಕಬ್ಬಿಗಿಂತ ಸವಿಯು ಮಾತು
ಸರಸದೀ ನೀನು ನುಡಿದರೆ
ಸ್ನೇಹದಿಂದ ಸೇರಿದಾಗ ಕಥೆಯ ಹೇಳುವೆ
ಪ್ರೀತಿಯಿಂದ ಹಾಡಿದಾಗ ಕವಿತೆ ಹಾಡುವೆ
ಶಶಿಯು ತರುವ ಬೆಳಕಂತೆ
ಸುರಿವ ಜೇನಾ ಹನಿಯಂತೆ

ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು

ಅಮ್ಮಯೆಂದು ನುಡಿಯುವಾಗ ನಲಿಯದೇ ನಿನ್ನ ಪ್ರಾಣವು
ತಾಯಿ ಭಾಷೆ ಆಡುವಾಗ ಕುಣಿಯದೇ ನಿನ್ನ ಜೀವವು
ನಿನ್ನ ಹೆತ್ತ ತಾಯ ಮಡಿಲು ದೇವ ಮಂದಿರ
ಕಣ್ಣ ಬಿಟ್ಟು ನೋಡುವೆಡೆಯೂ ನಿತ್ಯ ಸುಂದರ
ಕೋಟಿ ಜನುಮ ಪರ ಇಲ್ಲೇ
ನೀನೇ ಜೊತೆಯಾಗಿರು ನಲ್ಲೆ

ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಕನ್ನಡದ ಹೊನ್ನುಡಿಯು ಕಸ್ತೂರಿ ತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಇಂದು ಸೊಗಸು ಹಾಡಲು

ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು



Credits
Writer(s): Chi. Udayashankar, Vijayanand
Lyrics powered by www.musixmatch.com

Link