Ambara Ambaradaache

ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ

#INSTRUMENTAL
ಇದು ಶೀತಲ ಹಿಮಾಲಯವೋ
ಇದು ಬೆಚ್ಚನೆ ಪ್ರೇಮಾಲಯವೋ
ವಿಸ್ಮಯವೋ ತನ್ಮಯವೋ
ಕಣ್ಣೆರೆಡು
ಕೈಮುಗಿಯೋ
ಪರಶಿವನ ದೇವಾಲಯವು

ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ

#INSTRUMENTAL
ಅದೋ ಪರ್ವತ ಇದೋ ಹಿಮಮಳೆ ನಡುವಲ್ಲಿ ಕಾಣೋ ಕಣಿವೆಗಳಿಗೂ ಕಣ್ಣಿವೆ
ಶಿಖರ ಶೃಂಗ ಕಾಂಚನ ಜುಂಗ ತಪ್ಪಲಿನಲ್ಲೂ ಮಾತಾಡುವ ಚಳಿಯಿದೆ
ಎಂಥ ಚೆಂದ ಮಂದ ಮಾರುತ
ಕಳೆದು ಹೋದೆ ಜೀವ ಜಾರುತ
ಮೌನ ಏನೋ ಮೌನ
ಧ್ಯಾನ ಎಂಥ ಧ್ಯಾನ

ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ

#INSTRUMENTAL
ಇತ್ತ ಕೋಮಲ ಅತ್ತ ನಿರ್ಮಲ ಸಸ್ಯ ಸಂಕುಲವೇನಾ ಇದು ಸ್ವರ್ಗದ ಯೌವ್ವನ
ದಿನಕ್ಕೊಮ್ಮೆ ಆ ಸೂರ್ಯನ ಸ್ನಾನಕೆ ಇಳಿಸೋ ಹಿಮರಾಣಿಗೆ ನಮನ
ಅಚ್ಚಬಿಳಿಯ ಸೀರೆಯೊಳಗಿನ
ಸ್ವಚ್ಛ ಮನದ ಚೆಲುವೆ ಹಿಮಲತೆ
ಎಂಥ ಋಷಿಗೂ ಇವಳ ಮೋಹ ಮಾಯೆ ಬಿಡದು

ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ
ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ

Credits
Writer(s): K. Kalyan
Lyrics powered by www.musixmatch.com

Link