Yedeya Baanali

ಎದೆಯ ಬಾನಲಿ ಚುಕ್ಕಿ ಚೆಲ್ಲುತ
ಕನಸನೂರಲಿ ಇಣುಕಿ ನೋಡುತ
ಕಣ್ಣ ಕರೆಯಲಿ ಕರೆವಳಮ್ಮ
ಮಲ್ಲಿಗೆ ಮೊಗ್ಗು ಬೀರಿದಂಗೆ

ತಂಪು ಗಾಳಿಯ ಸೋನುವಂಗೆ
ಕಣ್ಣ ಕಾಡಿಗೆ ನಾಚುವಂಗೆ
ಹಂಗೆ ಹಿಂಗೇ ನಕ್ಕವಳಮ್ಮ
ಕನ್ನಡದ ನುಡಿ ಮುತ್ತಂಗೆ
ಹೇಗೆ ಹಾಡಲಿ ಏನ ಗೀಚಲಿ
ಕನಸಲೆಲ್ಲಾ ಕಚಗುಳಿ
ಪ್ರೀತಿ ಹುಟ್ಟಿದ ಮೇಲೆ ಅಂತೂ ಅವಳದೇನೆ ಹಾವಳಿ

ನಾನು ಕಾಣೋ ಕನಸಿನಲ್ಲಿ ಇವಳದೇನೆ ಉಸಾಬರಿ
ಮುದ್ದು ರಾಕ್ಷಸಿ ಮುಗುಳು ನಗೆಗೆ ನನ್ನ ಸೋಲು ಖಾತರಿ
ನನ್ನ ಎದೆಯ ಜೋಗುಳದಲೂ ಅವಳದೇನೆ ವೈಖರಿ
ನೆನ್ನೆ ನೆನಪಿಗೂ ನಾಳೆ ಕನಸಿಗೂ ಅವಳೇ ಆದಳು ವ್ಯಾಪಾರಿ
ಯಾರ ಕೇಳಲಿ ಯಾರಿಗ್ ಹೇಳಲಿ ಇವಳೇ ಚಂದ ಶಾಹಿರಿ
ಇವಳ ಮಾತಿಗೆ ಕಣ್ಣ ಏಟಿಗೆ ನನ್ನ ಕಳುವದು ಅಚ್ಚರಿ

ಎಲ್ಲೋ ಕೂರುತ ಏನೋ ಗೀಚುತ ಇವಳ ದಾರಿಗೆ ಕಾಯುವೆ
ಎಲ್ಲೇ ನಡೆದರೂ ಇವಳ ತುಂತುರು ಬಡವ ಹೇಗೆ ಬದುಕುವೆ
ನನ್ನ ಮನಸಿನ ಬೀದಿಯಲ್ಲಿ ಇವಳ ಚಿತ್ರದ ಸಂತೆಯು
ಕಾಡುತಾಳೆ ದೋಚುತಾಳೆ ಯಾರು ಇಲ್ಲ ಕಾವಲು
ಸಾಕು ಇವಳ ಗೆಲುವಿನಾಟ ನಾನೇ ಒಮ್ಮೆ ಸೋಲುವೆ
ಪ್ರೀತಿಯಲ್ಲಿ ಸೋತರೇನು ಹೃದಯದಲ್ಲೇ ಉಳಿಯುವೆ



Credits
Writer(s): Chandru S L, Premkumar S
Lyrics powered by www.musixmatch.com

Link