Ee Sanje

ಈ ಸಂಜೆ ಏಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ

ನೆರಳನೇ ಅರಿಯದ
ಅಪರಿಚಿತ ದಾರಿಯಲಿ
ಇರುಳಿನ ಸನಿಹಕೆ
ಈ ಸಂಜೆ ಏಕೆ ಜಾರುತಿದೆ

ಕಾರ್ಮೋಡ ಮಡಿಲಲ್ಲಿ ಹಾಸಿ ಮಲಗಿಸಲು
ಶಶಿಯಿನ್ನೂ ಬರಲಿಲ್ಲ ಭುವಿ ಬೆಳಗಿಸಲು

ಸೂರ್ಯನು ಅರಳುವ ವರೆಗೆ
ಬೆಳಕನೇ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ
ಕತ್ತಲೆಯ ತೇರನ್ನೇರಿ
ಬೀಸುವ ಗಾಳಿಯ ಜೊತೆಗೆ

ಈ ಸಂಜೆ ಏಕೆ ಜಾರುತಿದೆ

ಮುಸುಕನ್ನು ತೆರೆದಾಗ ಬಾರೋ ನಸುಕಿನಲಿ
ಮಸುಕುಂಟು ಜೋಪಾನ ಕಳ್ಳುಸುಕಿನಲಿ

ಸೆಳೆಯುವ ನೆನಪಿನ ಮರಳು
ಹೋದರೆ ಶಾಸ್ವತ ಇರುಳು
ಈ ಮಾತಿನ ತಿರುಳನು ಅರಿಯದೆ
ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂಥ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ

ಈ ಸಂಜೆ ಏಕೆ ಜಾರುತಿದೆ



Credits
Writer(s): Anup Bhandari
Lyrics powered by www.musixmatch.com

Link