Kaliyo Nee Kannada (From "Kannad Gothilla" Original Motion Picture Soundtrack)

ಹೇ ಪರದೇಸಿ ಬಾಬುಗಳೇ
ಪರಭಾಷೆ ಬಂಧುಗಳೇ
ಮಾತಾಡ್ರೋ ಮುದ್ದಾದ ಕನ್ನಡ
ಕನ್ನಡ ಬರದಿದ್ರೆ ಮಾತಲ್ಲಿ ಉಪ್ಪಿಲ್ಲ
ಅಂತಹ ರುಚಿ ಕಣ್ರೋ ಕನ್ನಡ

ಮಾತಲ್ಲಿ ಗತ್ತಿಲ್ಲ, ಕನ್ನಡ ಗೊತಿಲ್ಲ
ಕಲಿಯೋಕೆ ಹೊತಿಲ್ಲ ಅನ್ಬೇಡ
ನಾಲಿಗೆ ತೊಳೆದುಕೊಂಡು
ಮನಸಿಗೆ ಇಳಿಸಿಕೊಂಡು
ಮೆದುಳಿಗೆ ಕಲಿಸಿಕೊಡು ಕನ್ನಡ
ನಿಲ್ಸೋ ನೀ ಬೊಂಬಡಾ
ನಿನ್ನ ಭಾಷೆ ಸಂಗಡಾ
ಕಲಿಯೋ ನೀ
ಕನ್ನಡ... ಕನ್ನಡ... ಕನ್ನಡ

(ಕನ್ನಡ ಕಾಪಾಡಿ)

ಮಾಡೋಕ್ಕೆ ಕೆಲಸವಿಲ್ಲ
ಅಂತ ಎಲ್ಲ ಬರ್ತೀರಲ್ಲ
ಬಂದ್ಮೇಲೂ ಕಲಿಬಾರ್ದೆ ಕನ್ನಡ
ಕೆಲಸ ಕೈ ಕೊಟ್ಟಾಗ
ನಡುನೀರಲ್ ಬಿಟ್ಟಾಗ
ಕೆಲಸಕ್ಕೆ ಬರೋದೇ ಕನ್ನಡ

ಕನ್ನಡ ಬೇಕಿಲ್ಲ
ಬೆಂಗ್ಳೂರ್ ಮಾತ್ರ ಬೇಕಲ್ಲ
ಆಹಾ ನೀವು ಭಾರಿ ಪಾಕಡಾ
ಕುತ್ತಿಗೆಗೆ ಬಂದಾಗ ಹೊರಡಲೇಬೇಕಲ್ಲ
ಗಂಟಲಲ್ಲಿ ಸ್ವಲ್ಪ ಕನ್ನಡ
ನಿಲ್ಸೋ ನೀ ಬೊಂಬಡಾ
ನಿನ್ನ ಭಾಷೆ ಸಂಗಡಾ
ಕಲಿಯೋ ನೀ
ಕನ್ನಡ... ಕನ್ನಡ... ಕನ್ನಡ

ಕನ್ನಡ... ಕನ್ನಡ... ಕನ್ನಡ... ಕನ್ನಡ
ಕನ್ನಡ... ಕನ್ನಡ... ಕನ್ನಡ
ಕನ್ನಡ... ಕನ್ನಡ... ಕನ್ನಡ... ಕನ್ನಡ
ಕನ್ನಡ... ಕನ್ನಡ



Credits
Writer(s): Nakul Abhyankar, Hari Paraak
Lyrics powered by www.musixmatch.com

Link