Hasida Shikanu

ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ
ವ್ಯಾಘ್ರ ರೂಪ ಧರಿಸಿ ಬಂದ ಗ್ರಾಮ ಸಿಂಹವು
ಕ್ಲೇಶಭಾವ ತುಂಬಿ ತುಳುಕಿ ಎಲ್ಲಾ ನಾಶವು
ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ

ಮೊಗವದು ನೋಡಿ ಕನ್ನಡಿ ಖುಷಿಯನು ಪಡುತಲೀ
ಅರಳಿಸಿ ನೂರು ಕನಸನು ನೆನಪಿಸಿ ನಗುತಲೀ
ತನ್ನ ತನವ ಮರೆತ ಹೂವು ಏನೋ ಬಯಸಿತು
ಕಂಡ ಕನಸು ನಶಿಸಿ ಇಂದು ಮಣ್ಣು ಸೇರಿತು

ಹಸಿದ ಶಿಖನು ಬೇಟೆಯಾಡಿದೆ
ಒಡಲ ಕಸಿದು ಸೂರೆ ಮಾಡಿದೆ

ಕುಟಿಲವು ಹಾದಿ ನಡುವಲಿ ನುಸುಳುತಾ ಬಂದೆ ನಾ
ಜಟಿಲವು ಆದ ನಿನ್ನನು ಮುರಿಯಲು ಬಂದೆ ನಾ
ಮಾರುವೇಷ ಧರಿಸಿ ನಿಂತ ನಿನ್ನ ಕೂಪಕೆ
ಘೋರ ಶಿಕ್ಷೆ ಬಡಿಸಲೇಬೇಕು ನಿನ್ನ ಪಾಪಕೆ
ಉಸಿರು ಬಿಗಿದು ನಿನ್ನ ಜೀವಕೆ
ಕಡೆಯ ಘಳಿಗೆ ನೀಚ ಮನಸಿಗೆ



Credits
Writer(s): Adil Nadaf, Chanukya R
Lyrics powered by www.musixmatch.com

Link