Parichayisu - From "Navodaya Dayzz"

ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ
ಕರಿಸಿ ಕನಸನೇ
ಉಳಿಸಿ ನೆನಪನೇ
ಈ ಪ್ರೀತಿನೇ ನನಗೀಗ ಸಂಪಾದನೆ

ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ

ಕಾಡುವ ವಿಷಯ
ಗೀಚಿದೆ ಹರೆಯ
ನಲುಮೆ ಹೆಸರಲ್ಲಿ ಹೊಸ ಕಥೆಯ
ಸಾಗುವ ದಾರಿಯ
ನಡುವೆ ನಿನ್ನಯ
ಹೆಜ್ಜೆಯ ಜೊತೆಯಲಿ ಇದೆ ಹೃದಯ
ಅಗೆಸಿ ಮನವ ನೀ
ಅರಸಿ ಅವಳನೇ
ಈ ಪ್ರೀತಿನೇ ನನಗೀಗ ಸಂಶೋಧನೆ

ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ

ನೀನೀಗ ಮೋಡದಂತೆ
ನಾನೀಗ ಭೂಮಿಯಂತೆ
ಕಾಯುತ್ತ ಕೂತಿರುವೆ ಮಳೆಗಾಗಿ
ನೀನೀಗ ತೋಟದಂತೆ
ನಾನೀಗ ಬೇಲಿಯಂತೆ
ಕಾಯುತ್ತ ನಿಂತಿರುವೆ ಬಲವಾಗಿ
ಒಲವ ಮೇವನೇ
ಹಾಕಿ ಮೆಲಕನೆ
ಈ ಪ್ರೀತಿನೇ ನನಗೀಗ ಸಂಗೋಪನೆ

ಪರಿಚಿಯಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ



Credits
Writer(s): Harsha Vardhan Raj, Deepak Gangadhar
Lyrics powered by www.musixmatch.com

Link