Thanmayaladenu

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯ ಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು
ಇಲ್ಲೇ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೆ
ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೆ ನಾ ಗೀಚಲೇ ಹೆಸರೊಂದನ್ನು ಅಳಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ
ನನ್ನ ವಿರಹವೂ ನಿನ್ನಿಂದ ಇನ್ನು ಚೆಂದ
ವಿವರಿಸಲಾರೆ ಎಲ್ಲ ನಾ ದೂರದಿಂದ
ನೆನಪನ್ನೋ ರಾಶಿ ಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೇ ನಗುವೊಂದನು ಉರಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ



Credits
Writer(s): Jayanth Kaikini, V Harikrishna
Lyrics powered by www.musixmatch.com

Link