Kshana Kashna

ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೋ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೋ ಈ ಸಮಯ ನೂತನ

ದೂರದಲ್ಲೇ ನಿಂತು ನಿನ್ನ ಸೇರೋ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೋ ವೇಗ
ಪ್ರೀತಿಯನ್ನು ಪೂರ್ತಿ ಸೇರೋ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೇ ಇಲ್ಲ ನೀನು ಬಳಸು ಬೇಗ

ಅಂತರವೇ ಇರದ ಅರೆಯಾ
ಅಂದವ ಆದರಿಸುತ್ತಿದೆಯಾ
ಅಂಜಿಕೆಯ ಹೊರೆಯ ಸರಿಸಿ
ಸೇರುವೆ ನಿನ್ನನು ಸಮ್ಮತಿಸಿ

ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೋ ಹೊಸತನ

ಸಡಗರ ನಿನಗೆ ಮುಜುಗರ ನನಗೆ
ಮನಸಿನ ಪರದೆ ತೆರೆಯಲು
ಉಸಿರಿನ ಬಿಸಿಯ ಸಹಿಸುವ ಪರಿಯ
ಪರಿಚಯ ಮಾಡಿ ಕೊಡಿಸಲು

ಜೊತೆಯಲ್ಲಿ ನೀನಿರಲು ಬೇರೇನೂ ಬೇಕಿಲ್ಲ ಅನಿಸೋ
ಆ ಅಪ್ಪುಗೆಯ ಅಮಲಲ್ಲೇ ಇರಲು
ಕಯ್ಯಲ್ಲಿ ಕೈಹಿಡಿದು ರಮಿಸುತ ನನ್ನತ್ತ ನೀನು
ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತ ಕಳೆಯೋ ಹೊತ್ತು

ಅಂತರವೇ ಇರದ ಅರೆಯಾ
ಅಂದವ ಆದರಿಸುತ್ತಿದೆಯಾ
ಅಂಜಿಕೆಯ ಹೊರೆಯ ಸರಿಸಿ
ಸೇರುವೆ ನಿನ್ನನು ಸಮ್ಮತಿಸಿ

ಕ್ಷಣ ಕ್ಷಣ ಕೋರಿಕೆಯ ಅನುಕ್ಷಣ
ಅವಸರ ಆವರಿಸೋ ಹೊಸತನ
ಬಳಸುತ ನೀ ಬೆಸೆದು ಬಂಧನ
ಒಲಿದಿರೋ ಈ ಸಮಯ ನೂತನ

ದೂರದಲ್ಲೇ ನಿಂತು ನಿನ್ನ ಸೇರೋ ಆಸೆ ಈಗ
ಎದೆಯ ಗೂಡಿನಲ್ಲಿ ಉಸಿರು ಏರುತಿರೋ ವೇಗ
ಪ್ರೀತಿಯನ್ನು ಪೂರ್ತಿ ಸೇರೋ ಸಮಯ ಬಂತು ಈಗ
ಇನ್ನು ಕಾಯೋದ್ ಸರಿಯೇ ಇಲ್ಲ ನೀನು ಬಳಸು ಬೇಗ



Credits
Writer(s): Dhananjay Ranjan, Anand Rajavikram
Lyrics powered by www.musixmatch.com

Link