Jeeva Needo

ಜೀವ ನೀಡೋ ಪಾಲುದಾರ ದೇವರು ನೀನು
ದೇಹಕೆಯಿದು ನಮ್ಮ ಸಾಕು ಸಾಹುಕಾರನು
ನಿನ್ನ ದೂರಿದೆ, ಕಿಡಿ ಕಾರಿದೆ
ನನ್ನ ಮನ್ನಿಸು, ರಾಜನೇ
ನಿನ್ನ ಪ್ರೀತಿಯ ಸವಿ ಬೇಕಿದೆ ಬಾ ತಿನ್ನಿಸು ತೇಜನೆ

ಈ ತ್ಯಾಗವ ಮಾಡಿದ ಯೋಧನ (ಯೋಧನ)
ಆ ತುತ್ತಲಿ ಕಾಣದೆ ಹೋದೆನಾ (ಹೋದೆನಾ)
ನನ್ನ ಸಾಕಿದ ಜೀವಕೆ ಈ ದಿನ (ಈ ದಿನ)
ನಾ ಗೌರವ ನೀಡದೆ ಹೋದೆನಾ (ಹೋದೆನಾ)

ಅಪ್ಪ ಎಂದು ಓಡಿದಾಗ ತುತ್ತು ನೀಡಿದ
ತಪ್ಪು ಎಂದು ಕಾಣುವಾಗ ಬುದ್ಧಿ ಹೇಳಿದ
ಜೀವನಾನ ಮೀಸಲಿಟ್ಟು ನಮ್ಮ ಸಾಕಿದ
ಸ್ವಾರ್ಥವೆಲ್ಲ ದೂರವಿಟ್ಟು ಸೇವೆ ಮಾಡಿದ

ಆ ಕಾರಣ ಈತನೇ ತ್ಯಾಗಿಯು (ತ್ಯಾಗಿಯು)
ಈ ಬಾಳಿನ ಧ್ಯಾನಕೆ ಯೋಗಿಯು (ಯೋಗಿಯು)
ನಮಗಾಗಿಯೇ ಬೇಡುವ ಜೋಗಿಯು (ಜೋಗಿಯು)
ನಮ್ಮ ನೋವಲಿ ಎಂದಿಗೂ ಬಾಗಿಯು (ಬಾಗಿಯು)

ಸನಿಹದಲ್ಲಿ ನೀನು ಇರಲು ನೋವು ನೀಡಿದೆ
ದೂರದಲ್ಲಿ ನಿನ್ನ ರೂಪ ನನ್ನ ಕಾಡಿದೆ
ಬಾಳಿನಲ್ಲಿ ಸ್ನೇಹವಿರದೆ ಯಾರು ಬಾಳ್ವರು
ತಂದೆ ಅಂತ ಸ್ನೇಹಜೀವಿ ಎಲ್ಲಿ ಸಿಗುವರು

ಈ ಸ್ನೇಹಕೆ ಹೇಳುವೆ ವಂದನೆ (ವಂದನೆ)
ಇನ್ನೆಂದಿಗೂ ಮಾಡೆನು ನಿಂದೆನೆ (ನಿಂದೆನೆ)
ನಾ ಇಂದಿಗೂ ಅಪ್ಪನ ಕಂದನೇ (ಕಂದನೇ)
ನನ್ನ ನೆಚ್ಚಿನ ನಾಯಕ ತಂದೆನೇ



Credits
Writer(s): Mahesh Jogi
Lyrics powered by www.musixmatch.com

Link