Suryana Kirana

ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
ಕಾಂಚನ ಗಂಗಾ ಏರಲಿ ಪ್ರೀತಿ
ಚಂದ್ರ ಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತಿನಾ ಉಳಿಸಿಕೊಳ್ಳುವೆ

ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು

ಯಾರಿಗೂ ಕಾಣದ ಪ್ರೀತಿ ಇದು ಜೋಗದ ಜೋರಿನ ರೀತಿಯಿದು
ಎದೆಯೊಳಗೆ ಝುಳು ಝುಳು ಅಂತ ಪುಳುಕ ತುಂಬಿದೆ
ನೆನ್ನೆವರೆಗೂ ನೀನ್ಯಾರು ಮೊನ್ನೆವರೆಗೂ ನಾನ್ಯಾರು
ಕಣ್ಣಲ್ಲಿ ಕಟ್ಟಿಬಿಟ್ಟೆ ಪ್ರೀತಿ ಸೇತುವೆ
ಕಲ್ಲಂತ ಮನಸು ಕರಗೊಯ್ತು ಇಂದು ಕನಸಲ್ಲೂ ಕೂಡ ಹೊಸತು ಇದು
ಕನಸಲ್ಲೂ ನಿನ್ನ ನಾ ಮರೆಯಲಾರೆ ನಮ್ಮಿಬ್ಬರೆದೆಯು ಬೇರಾಗದು
ಜನುಮಕ್ಕೂ ಜನುಮಕ್ಕೂ ನಮ್ಮ ಜೀವನ
ಅರಳುವುದು ಬೆಳಗುವುದು ಎಂಥ ಬಂಧನ

ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು

ಪ್ರೀತಿಯೇ ಧೈವದ ಸಂಕೇತ ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿರುಸಿರಲ್ಲೂ ಪ್ರೀತಿ ಆಶ್ರಯ
ಪ್ರೀತಿಯು ಒಂದು ಕನ್ನಡಿಯು ಮನಸನು ಬಿಂಬಿಸೋ ಮುನ್ನುಡಿಯು
ಬೆರೆಯುವ ಕ್ಷಣ ಕ್ಷಣದಲ್ಲೂ ಏನೋ ವಿಸ್ಮಯ
ನೀ ಕಟ್ಟಿಕೊಡುವ ನೂರಾಸೆಗಾಗಿ ನಾ ಹುಟ್ಟಿ ಬರುವೆ ಜೊತೆ ಜೊತೆಯಲಿ
ಈ ಸೃಷ್ಟಿಯೊಳಗೆ ಏನೇನೆ ಇರಲಿ ನೀ ಮಾತ್ರ ಇರುವೆ ನನ್ನೆದೆಯಲಿ
ಪ್ರಕೃತಿಯೇ ಪ್ರಕೃತಿಯೇ ನಡೆಸು ನಮ್ಮನು
ಪ್ರೀತಿಸು ಈ ಜೀವಗಳ ನಾಳೆಗಳನ್ನು

ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
ಕಾಂಚನ ಗಂಗಾ ಏರಲಿ ಪ್ರೀತಿ
ಚಂದ್ರ ಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತಿನಾ ಉಳಿಸಿಕೊಳ್ಳುವೆ



Credits
Writer(s): K Kalyan, S.a Rajkumar
Lyrics powered by www.musixmatch.com

Link