Joa Joa Joa Lali

ಜೋಜೋ ಜೋಜೋ
ಜೋಜೋ ಜೋಜೋ ಜೋ
ಜೋಜೋ ಜೋಜೋ
ಜೋ ಲಾಲಿ ಜೋಜೋ ಜೋ

ನಮದೊಂದು ಸುಂದರ ಊರು
ಪ್ರೀತೀನೆ ನಮಗಿಲ್ಲಿ ಸೂರು
ಬೆಳದಿಂಗಳೇ ಜೋಲಿ
ತಂಗಾಳಿ ಲಾಲಿ
ಮಲಗೇ ಕಂದಮ್ಮ
ಜೋಜೋ ಜೋ
ಜೋಜೋ ಜೋ

ಮಮತೆಯ ಮಡಿಲಲ್ಲಿ ಕರುಳಿನ ಕಥೆ ಬರೆದ ಜೀವಾನೇ ನೀನಮ್ಮ
ಕರುಳಿನ ಕುಡಿಯಾಗಿ ಕಣ್ಣೀರಲೂ ಕನಸಿಡುವ ದೈವಾನೇ ನೀನಮ್ಮ
ಮಲಗಮ್ಮ
ಅರೆಗಣ್ಣು ತೆಗೆದು
ಹುಸಿನಗೆಯ ಬರೆದು
ಮಲಗೇ ಕಂದಮ್ಮ
ಜೋಜೋ ಜೋ
ಜೋಜೋ ಜೋ

ನನಗೆಂದೇ ನೀನಿರುವೆ
ನಿನಗಾಗೇ ನಾನಿರುವೆ
ನಾವಿಬ್ಬರೇ ನಮಗಮ್ಮ
ಹಗಲುಗಳ ಬಟ್ಟಲಲಿ
ಇರುಳುಗಳ ತೊಟ್ಟಿಲಲಿ
ಕಾಲಾನೇ ಮಗುವಮ್ಮ
ಮಲಗಮ್ಮ

ಬೆಳದಿಂಗಳೇ ಜೋಲಿ
ತಂಗಾಳಿ ಲಾಲಿ
ಮಲಗೇ ಕಂದಮ್ಮ
ಜೋಜೋ ಜೋ
ಜೋಜೋ ಜೋ

ನೋವಿರಲಿ ನಲಿವಿರಲಿ
ಮಳೆಯಿರಲಿ ಬಿಸಿಲಿರಲಿ
ನೆರಳೆಂದೂ ನೀನಮ್ಮ
ನಾಳೆಗಳ ದಾರಿಯಲಿ
ನಂಬಿಕೆಯ ಉಳಿಸುವ
ಕೋರಲೆಂದೂ ನೀನಮ್ಮ
ಮಲಗಮ್ಮ

ಅರೆಗಣ್ಣು ತೆರೆದು
ಹುಸಿನಗೆಯ ಬರೆದು
ಮಲಗೇ ಕಂದಮ್ಮ
ಜೋಜೋ ಜೋ
ಜೋಜೋ ಜೋ



Credits
Writer(s): K Kalyan, Sadhu Kokila
Lyrics powered by www.musixmatch.com

Link