Ondondsari

ಒಂದೊಂದ್ಸಾರಿ ಹಿಂಗೇನೆ
ನೋಡ್ನೋಡತಾ ಇದ್ಹಂಗೇನೆ
ಆಕಾಶನೇ ಅಂಗೈಮೇಲೆ ತಂದ್ಹಿಡೀತಾನೆ
ಗಂಡು ಅಂದ್ರೆ ಹಿಂಗೇನೆ
ಪ್ರೀತಿ ಅಂದ್ರೆ ತಂತಾನೆ
ಬಂಡೆ ಆದ್ರೂ ಬೆಣ್ಣೆಯಂತೆ ಕರ್ಗೊಗ್ತಾನೆ
ನನಗೆ ಇದೇನಾಯಿತೋ ಕಾಣೆ
ಮನಸೇ ಕಳೆದ್ಹೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೇ ಜಪವಾಗಿದೆ

ಒಂದೊಂದ್ಸಾರಿ ಹಿಂಗೇನೆ
ನೋಡ್ನೋಡತಾ ಇದ್ಹಂಗೇನೆ
ಆಕಾಶನೇ ಅಂಗೈಮೇಲೆ ತಂದ್ಹಿಡೀತಾನೆ

ಪ್ರೀತಿಯಿಂದಲೇ ತಾನೇ ಆ ಮೋಡ ಕರಗಿ ಮಳೆಯೂ ಸುರಿಯೋದು
ಹೌದಾ
ಪ್ರೇಮ ಇದ್ರೆ ತಾನೇ ಆ ಕಡಲ ಕಡೆಗೆ ಹೊಳೆಯು ಹರಿಯೋದು
ಹಂಗಾ
ದುಂಬಿ ಗಂಡು ಹೂವಾ ಕಂಡು ಶರಣಾಗೋದು
ಈ ಜಿಂಕೆ ಗಂಡು ಹಸಿರ ಕಂಡು ಮರುಳಾಗೋದು
ಬೀಸೋ ಗಾಳಿಗೆ ಭಾರಿ ಮರವೇ ತಲೆ ಬಾಗೋದು
ಈ ಕಡಲ ನೀರು ಕುಣಿದು ಕುಣಿದು ಅಲೆಯಾಗೋದು

ಒಂದೊಂದ್ಸಾರಿ ಹಿಂಗೇನೆ
ನೋಡ್ನೋಡತಾ ಇದ್ಹಂಗೇನೆ
ಆಕಾಶನೇ ಅಂಗೈಮೇಲೆ ತಂದ್ಹಿಡೀತಾನೆ

ಸೂರ್ಯ ಚಂದ್ರ ಸಾಕ್ಷಿ ಒಂದ್ಸಾವಿರ ವರ್ಷ ಹಾಯಾಗಿರ್ತೀವಿ
ಹೌದಾ
ನಾ ಮುದ್ದಿನ ಮಡದಿಯಾಗಿ
ನಿನ್ ನೂರು ಮಕ್ಕಳ ತಾಯಾಗಿರ್ತಿನಿ
ಹಂಗಾ
ಜೋಡಿ ಹಕ್ಕಿಯಾಗಿ ನಾವು ಹಾರಾಡುವ
ಈ ಕಾಮನ ಬಿಲ್ಲೆ ಜರುಗುಪ್ಪೆ ಜಾರಾಡುವ
ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವ
ಈ ಪ್ರೀತಿಯಲ್ಲೇ ಮುಳುಗಿ ಎದ್ದು ಈಜಾಡುವ
ಹೆಣ್ಣು ಅಂದ್ರೆ ಹಿಂಗೇನೆ
ವಯ್ಸಿಗ್ ಬರ್ತಿದ್ಹಂಗೆನೇ
ಆಕಾಶಕ್ಕೆ ಏಣಿ ಹಾಕೋದ್ ಸಹಜ ತಾನೇ

ಪ್ರೀತಿ ಅಂದ್ರೆ ಹಿಂಗೇನೆ
ಎರಡು ಜೀವ ಒಂದೇನೆ
ಭೂಮಿ ತುಂಬ ಇನ್ನು ಮುಂದೆ ನಾನು ನೀನೆ
ನನಗೆ ಇದೇನಾಯಿತೋ ಕಾಣೆ
ಮನಸು ಕಳೆದೋಗಿದೆ
ಹೊರಗೆ ನನ್ನೊಳಗೆಲ್ಲ ನೀನೆ
ನಿನದೇ ಜಪವಾಗಿದೆ



Credits
Writer(s): Prof. Krishnegowdru, B. Ajaneesh Lokanath
Lyrics powered by www.musixmatch.com

Link