Onde Aetige

ಒಂದೇ ಏಟಿಗೆ ಕೊಂದೇ ಬಿಟ್ಟಳು
ಮುಲಾಜೇ ಇರದಂತೆ ನನ್ನನ್ನು
ಚೂಪಾದ ಕಣ್ಣೊಂದು ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನೆನೆದು
ಮೊದಲನೇ ಹುಚ್ಚು ನನಗೆ ಹೀಗೆ

ಒಂದೇ ಏಟಿಗೆ ಕೊಂದೇ ಬಿಟ್ಟಳು
ಮುಲಾಜೇ ಇರದಂತೆ ನನ್ನನ್ನು

ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾ ನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲೀ ನಾನೆಲ್ಲೇ ಗಮನಾ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನೆನೆದು
ಮೊದಲನೇ ಹುಚ್ಚು ನನಗೆ ಹೀಗೆ

ನಿನ್ನ ತೋಳಲಿ ತುಂಬಿಕೋ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೇ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನೆನೆದು
ಮೊದಲನೇ ಹುಚ್ಚು ನನಗೆ ಹೀಗೆ



Credits
Writer(s): Kaviraj, S A Lokesh Kumar
Lyrics powered by www.musixmatch.com

Link