Chuttu Chuttu

ಹೇ ಹುಡ್ಗಿ ಯಾಕ್ ಹಿಂಗಾಡ್ತಿ
ಮಾತಲ್ಲೇ ಮಳ್ಳ ಮಾಡ್ತಿ
ವರ್ಸಾತು ಹಿಂಗಾಡ್ತಿ
ಸಿಗವಲ್ಲಿ ಕೈಗೆ

ಹೇ ಹುಡುಗ ಯಾಕೋ ಕಾಡ್ತಿ
ಸಿಕ್ಕಲ್ಲೇ signal ಕೊಡ್ತಿ
ದಿನಕ್ಕೊಂದು dialogue ಹೊಡಿತೀ
ಹ್ಯಾಂಗೈತಿ ಮೈಗೆ

ನಿನ್ನ ನಡುವು ಸಣ್ಣ್ಐತಿ
ನಡಿಗೆ ಕಣ್ಣ್ ಕುಕ್ಕೈತಿ
ನಿನ್ನ ಗುಂಗ ಎರೈತಿ
ಮನ್ಸು ಮಂಗ್ಯಾ ಆಗೇತಿ
ನನ್ನ ತಲಿಯಾ ಕೆಡ್ಸೇತಿ

ಹೇ ಹುಡುಗಿ
ಏನ ಮಾವ
ಚುಟ್ಟು ಚುಟ್ಟು
ಎಲ್ಲಿ

ಚುಟ್ಟು ಚುಟ್ಟು ಅಂತೈತೀ
ನನಗ ಚುಮು ಚುಮು ಆಗ್ತೈತಿ
ಚುಟ್ಟು ಚುಟ್ಟು ಅಂತೈತೀ
ನನಗ ಚುಮು ಚುಮು ಆಗ್ತೈತಿ

ಜಾತ್ರೆ ಜಾಗರ್ಣಿಯಾಗ
ಸಂತೆ ಬಜಾರ್ದಾಗ
ಸಾಲ ಕೊಟ್ಟೊನಂಗ ಕಾಡ್ತೀ
ಕಣ್ಣಲ್ಲೇ miss call-u ಕೊಡುತೀ

ಊರ್ ತುಂಬ ಹುಡ್ಗೀರಿದ್ರು
ನಿನ್ನ ಮ್ಯಾಲ ನನ್ನಾನೆದುರು
ಮನ್ಸಿದ್ರು ಇಲ್ಲದ್ಹಾಂಗ ನುಲಿತೀ
ಇದನ್ಯಾವ ಸಾಲ್ಯಾಗ ಕಲಿತೀ

(ಮನಸಲ್ಲಿ ಹುಡುಗ ಮಸಾಲೆ ಅರಿತೀ
ಸಿಕ್ಕಲೇ ಸೀಸೆ ಮಾಡಕ್ಕೆ ಬರ್ತಿ)

ನಿನ್ನ ನೋಟದ ಮೈಮಾಟದ
Balance ತಪ್ಪೇತಿ

ಹೇ ಹುಡುಗಿ
ಏನ ಮಾವ

ಚುಟ್ಟು ಚುಟ್ಟು ಅಂತೈತೀ
ನನಗ ಚುಮು ಚುಮು ಆಗ್ತೈತಿ
ಚುಟ್ಟು ಚುಟ್ಟು ಅಂತೈತೀ
ನನಗ ಚುಮು ಚುಮು ಆಗ್ತೈತಿ

ಊರ್ ಹಿಂದ ಬಾಳೆ ತೋಟ
ಊರ್ ಮುಂದ ಖಾಲಿ site-a
ಇದಕೆಲ್ಲಾ ನೀನಾಗ ಒಡತಿ
ಮತ್ಯಾಕ ಅನುಮಾನ ಪಡತೀ

ಹಾ... ಶೋಕೀಗೆ ಸಾಲ ಮಾಡಿ
ತಂದೀದಿ bullet ಗಾಡಿ
ನನ್ನೋಡಿ double horn ಹೊಡಿತೀ
ಊರಾಗ ನೀನೆಷ್ಟೋ ಮೆರಿತೀ

ಊರಾಗ ನಂದೊಂದ್ level-a ಐತಿ
ದಾರ್ಯಾಗ್ ನಿಂತು ಯಾಕ ಬೈತಿ

ಎಷ್ಟು ಕಾಡತಿ
ಮಳ್ಳ ಮಾಡತಿ
ಮನಸ್ಹ್ಯಾಂಗ ತಡಿತೈತಿ

ಮಾವ
ಏನ ಹುಡುಗಿ

ಚುಟ್ಟು ಚುಟ್ಟು ಅಂತೈತೀ
ನನಗೂ ಚುಮು ಚುಮು ಆಗ್ತೈತಿ
ಚುಟ್ಟು ಚುಟ್ಟು ಅಂತೈತೀ
ನನಗೂ ಚುಮು ಚುಮು ಆಗ್ತೈತಿ
ಚುಟ್ಟು ಚುಟ್ಟು ಅಂತೈತೀ
ನನಗೂ ಚುಮು ಚುಮು ಆಗ್ತೈತಿ



Credits
Writer(s): S A Lokesh Kumar, Shivu
Lyrics powered by www.musixmatch.com

Link