Geleya Beku

ಯಾರಿಗೋ ಏನೇನೋ ನೀಡುವ ದೇವನೇ, ನನ್ನಯ ಮನವಿ ಸಲ್ಲಿಸಲೇನು?
ಬೆಚ್ಚನೆ ಭಾವ ಮೂಡಿಸುತಿರುವ ಮನಸಿನ ಆಸೆ ಕೇಳುವೆಯೇನು?

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳೆಯ ಬೇಕು
ಇದ್ದಲ್ಲಿ ಇದ್ದ ಹಾಗೇ ಸದ್ದೇನೇ ಆಗದಂತೆ ಹೃದಯ ಕದ್ದು ಹೋಗಬೇಕು

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳೆಯ ಬೇಕು

ನೆನೆದಾಗೆಲ್ಲ ಹಾಗೇನೇ ಓಡಿ ಬರಬೇಕು
ಕಾದಾಗೆಲ್ಲ ಮುತ್ತಿನ ದಂಡ ತೆರಬೇಕು
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ

ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಎನಬೇಕು
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು

ಎಲ್ಲಾರೂ ಜಾತ್ರೆಯಲ್ಲಿ ತೇರನ್ನೇ ನೋಡೋವಾಗ ಅವನು ನನ್ನೇ ನೋಡಬೇಕು
ಕಾಡುವಂಥ ಗೆಳೆಯ ಬೇಕು ಎಂದೂ ನನ್ನ ಹಿಂದೆ ಮುಂದೆ ಸುಳಿಯಬೇಕು

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳೆಯ ಬೇಕು

ಇದ್ದ ಹಾಗೆ ನೀ ನನಗೆ ಚೆಂದ ಅನಬೇಕು
ಯಾಕೋ ಬೇಜಾರಾದಾಗ ಸುಮ್ಮನಿರಬೇಕು
ಮುದ್ದು ನಗೆಯ ಹೂವನ್ನು ಮುಡಿಸ ಬರಬೇಕು
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು
ದೇವರಂಥ ಗೆಳೆಯ ಬೇಕು ಹೇಳದೇನೆ ಅವನಿಗೆಲ್ಲ ತಿಳಿಯಬೇಕು

ಯಾರಿಗೋ ಏನೇನೋ ನೀಡುವ ದೇವನೇ, ನನ್ನಯ ಮನವಿ ಸಲ್ಲಿಸಲೇನು?
ಬೆಚ್ಚನೆ ಭಾವ ಮೂಡಿಸುತಿರುವ ಮನಸಿನ ಆಸೆ ಕೇಳುವೆಯೇನು?

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳೆಯ ಬೇಕು
ಇದ್ದಲ್ಲಿ ಇದ್ದ ಹಾಗೇ ಸದ್ದೇನೇ ಆಗದಂತೆ ಹೃದಯ ಕದ್ದು ಹೋಗಬೇಕು

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳೆಯ ಬೇಕು



Credits
Writer(s): Mano Murthy, Jayant Kaikini
Lyrics powered by www.musixmatch.com

Link