Nenapidu Nenapidu

ನೀ ನಕ್ಕರೆ ಬೆಲ್ಲ ಸಕ್ಕರೆ ಎಲ್ಲೂ (ಎಲ್ಲೂ, ಎಲ್ಲೂ, ಎಲ್ಲೂ)
ನಿನ ಕಂಡರೆ ನಿಲ್ಲದ ಅಕ್ಕರೆಯೋ
(Baby, baby)
ನಿನ ಎದೆಯಲಿ ಎಂದಿಗೂ ಆಸರೆಯೇ?
(You know what it is
It's a matter about the heart)
ಕೈ ಸೋಕಿದ ತಕ್ಷಣ ಕೈಸೆರೆಯೋ
(Let your heart sing
Let's go)

ನೆನಪಿದು ನೆನಪಿದುMಕನಸಲೂ ಮರೆಯದ ನೆನಪಿದು
ಮನಸ್ಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗೂ ನಾಳೆಗೂ
ಮೀರಿದ ಸುಂದರ ಹಾಡಿದು (ಹಾಡಿದು)
ಹಾಡಲೇ ಲೋಕವ ಸುತ್ತುವ ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳುನಗೆಯ
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯ
ಒಂದು ಪ್ರೀತಿಯ ಮಾತಿಗೆ ಬರೆದಿಡುವೆ ಈ ಪೃಥ್ವಿಯ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸ್ಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು

ನೂರಾರು ಕೋಗಿಲೆ ಒಟ್ಟಾಗಿ ಹಾಡಿವೆ
ಗುಟ್ಟಾಗಿ ನೀನು ಬರೆದಿಟ್ಟಿರುವ ಪ್ರೇಮ ಗೀತೆ (ಪ್ರೇಮ ಗೀತೆ)
ಆ ಪ್ರೇಮ ಗೀತೆಯ ಪ್ರತಿಯೊಂದು ಅಕ್ಷರ
ನೀ ನೀಡಿದಂಥ ಮುತ್ತು ತಾನೆ ಅದಕೆ ಸೋತೆ (ಅದಕೆ ಸೋತೆ)
ಕಣ್ಣೊಳಗೆ ಬರೆದಿಡುವೆ ಕಥೆ ಓದುವ ಬಾ ಜೊತೆ
ಚರಿತೆಯಲಿ ಬರೆದಿಟ್ಟಾಗಿದೆ ಜನುಮದ ಜೊತೆ
ನಿನ್ನ ನೆರಳನ್ನ ಕೂಡಿಟ್ಟು ಬೆಳಕಿಗೆ ಬೆಲೆಕಟ್ಟುವೇ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸ್ಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು

ನೀ ನಕ್ಕರೆ ಬೆಲ್ಲ ಸಕ್ಕರೆ ಎಲ್ಲೂ
ನಿನ ಕಂಡರೆ ನಿಲ್ಲದ ಅಕ್ಕರೆಯೋ

ಹೃದಯಾನ ತೆರೆಯುವೆ
ಜಗವನ್ನೇ ಮರೆಯುವೆ (ಮರೆಯುವೆ)
ಪ್ರತಿ ದಿಕ್ಕು ಕೇಳಬೇಕು ನಮ್ಮ ಪ್ರೀತಿ ಹಾಡು (ಪ್ರೀತಿ ಹಾಡು)
ಪ್ರತಿಯೊಂದು ಯುಗದಲೂ ನಿನಗಾಗಿ ಹುಟ್ಟುವೆ
ನನ ಪ್ರಾಣಪಕ್ಷಿಗಾಗಿ ನೀಡು ಎದೆಯಗೂಡು (ಎದೆಯಗೂಡು)
ಬದುಕೆಂಬ ನದಿಯೊಳಗೆ ಇದೆ ಕನಸುಗಳ ಅಲೆ
ಅಲೆಗಳನು ತಲೆಕಾಯುವುದೇ ಹೃದಯದ ಕಲೆ
ನೋಡು ಆಕಾಶದ ಪೂರ ನಮಗಿಬ್ಬರಿದು ಹೂಮಳೆ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸ್ಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗೂ ನಾಳೆಗೂ ಮೀರಿದ ಸುಂದರ ಹಾಡಿದು
ಹಾಡಲೇ ಲೋಕವ ಸುತ್ತುವ ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳುನಗೆಯ
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯ
ಒಂದು ಪ್ರೀತಿಯ ಮಾತಿಗೆ ಬರೆದಿಡುವೆ ಈ ಪೃಥ್ವಿಯ

ನೀ ನಕ್ಕರೆ ಬೆಲ್ಲ ಸಕ್ಕರೆ ಎಲ್ಲೂ
ನಿನ ಕಂಡರೆ ನಿಲ್ಲದ ಅಕ್ಕರೆಯೋ
ನಿನ ಎದೆಯಲ್ಲಿ ಎಂದಿಗೂ ಆಸರೆಯೇ (ಆಸರೆಯೇ, ಆಸರೆಯೇ)
ಕೈ ಸೋಕಿದ ತಕ್ಷಣ ಕೈಸೆರೆಯೋ



Credits
Writer(s): Kalyan K, Mani Kanth Kadri
Lyrics powered by www.musixmatch.com

Link