Haadondu Naa Haaduvenu (From "Shruthi")

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನುಮನದ ಆಸೆ ಚೆಲ್ಲಿ

ಇಂದು ಬಂದ ಹೊಸ ಚೈತ್ರ ನಗಲಿ ಎಂದೂ
ನಾವು ನಡೆವ ಹಾದಿಯಲಿ ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ ಎಂದೂ ಹಾಡೇ ಇಲ್ಲ
ಶೃತಿ ಸೇರೆ ಹಾಡಿನಲ್ಲಿ ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು ದಾರಿ ತೋರಿ ಜೊತೆಯಾಯ್ತು
ನಿಜವಾದ ಸ್ನೇಹ ತಂದು ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು
ಹೊಸ ಉಸಿರು
ನೀನು ನೀಡಿದೆ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನುಮನದ ಆಸೆ ಚೆಲ್ಲಿ

ಕೋಟಿ ತಾರೆ ನಡುವಿನಲಿ ಚಂದ್ರ ಅಂದ
ನೀನು ಬಂದ ಈ ಘಳಿಗೆ ನಮಗೆ ಚೆಂದ
ಹಾಡದೆ ಉಳಿದ ಕೊರಳಿಗೆ ಇಂದು ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು ಧ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ ಕೊರಳು ಇಲ್ಲುಂಟು
ಮೂಜಗವ ಹಾಡಿನಲೇ ನಾವು ಗೆಲ್ಲುವ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನುಮನದ ಆಸೆ ಚೆಲ್ಲಿ



Credits
Writer(s): R.n. Jaygopal, S. A. Rajkumar
Lyrics powered by www.musixmatch.com

Link