Iniya Saniye

ಇನಿಯ ಸನಿಹ ಸರಿದು ಬರಲು
ಅರಳಿ ನಗುವ ಸುಮದ ಮೊಗವು ನಾಚುವುದೇಕೆ?
ಹೀಗೆ ಕೋಪವು ಏಕೆ?
ದೂರ ಹೋಗುವುದೇಕೆ?
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ ಬಣ್ಣ ಬಂದಿತೇಕೆ?
ಆ ನಿನ್ನ ಕಣ್ಣಿನ ಬೆಳ್ಳಿಯಂಚಲಿ ಮಿಂಚು ಮಿಂಚಿತೇಕೆ?

ಇನಿಯ ಸನಿಹ ಸರಿದು ಬರಲು
ಅರಳಿ ನಗುವ ಸುಮದ ಮೊಗವು ನಾಚುವುದೇಕೆ?
ಹೀಗೆ ಕೋಪವು ಏಕೆ?
ದೂರ ಹೋಗುವುದೇಕೆ?

ತಾಳಿ ಕೊರಳ ಸೇರಿ ಅನುಮತಿ ನೀಡಿ
ಮೊದಲ ರಾತ್ರಿ ಬಂದು ಹಿರಿಯರು ಕೂಡಿ
ಕದವ ತೆಗೆದು ಕೋಣೆಯೊಳಗೆ ಹೋಗಿ ಎನ್ನಲಿ
ನಂಬಿದ ಹೆಣ್ಣೇ
ನಂಬಿದ ಹೆಣ್ಣೇ ದೂರವಾದರೆ
ಕಂಬಳಿ ತಾನೆ ಚಳಿಗೆ ಆಸರೆ

ಇನಿಯ ಸನಿಹ ಸರಿದು ಬರುವ ಸಮಯವನ್ನು ಬರುವ ಮುನ್ನ ಆಸೆಯು ಏಕೆ?
ಹೀಗೆ ನೋಡುವುದೇಕೆ?
ನನ್ನ ಕಾಡುವದೇಕೆ?
ಈ ಕಣ್ಣ ಬಾಷೆಯ ಕಂಡು ತಿಳಿವ ಜಾಣ್ಮೆ ಇಲ್ಲವೇನು?
ನಾನೇ ಆಚೆಯಿಂದಲಿ ನಿನ್ನ ಕೂಗುವೆ ಕಾಯಲಾರೆ ಎನು?

ಗಾಳಿ ಬೀಸಿದಾಗ ಜೀವ ಲತೆಗೆ
ಕಡಲ ಸೇರಿದಾಗ ಶಾಂತಿ ನದಿಗೆ
ಒಲವಿನಿಂದ ಬೆರೆತರೇನೆ ಗೆಲುವು ಬಾಳಿಗೆ
ಮಾಗಿದ ಮೇಲೆ
ಮಾಗಿದ ಮೇಲೆ ಹಣ್ಣಲಿ ಸವಿಯು
ತಾಳಿದಾಗಲೇ ಬಾಳಲಿ ಸಿಹಿಯು

ವೀಣೆ ಮೇಲೆ ಬೆರಳು ಕುಣಿದಾಡಿದರೆ
ನೂರು ರಾಗ ಹೊಮ್ಮಿ ಹಿತವಾಗಿರದೇ
ಹೃದಯ ವೀಣೆಯಂತೆ ನನ್ನ ನುಡಿಸಬಾರದೇ?
ಬಾಳಿನ ಗೀತೆ ನಾ ಹಾಡುವೆನು
ಅನುರಾಗವನೇ ಬಾ ತುಂಬುವೆನು

ಇನಿಯ ಸನಿಹ ಸರಿದು ಬರುವ ಸಮಯವಿನ್ನು ಬರುವ ಮುನ್ನ ಆಸೆಯು ಏಕೆ?
ಹೀಗೆ ಕೋಪವು ಏಕೆ?
ನನ್ನ ಕಾಡುವುದೇಕೆ?
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ ಬಣ್ಣ ಬಂದಿತೇಕೆ?
ಈ ಕಣ್ಣ ಬಾಷೆಯ ಕಂಡು ತಿಳಿವ ಜಾಣ್ಮೆ ಇಲ್ಲವೇಕೆ?



Credits
Writer(s): Ilaiyaraaja
Lyrics powered by www.musixmatch.com

Link