Tsunami (From "Tsunami (Kannada)")

ಹುಚ್ಚು ಅಲೆಗಳ ಪ್ರೀತಿ ನಿನ್ನದು
ಎಲ್ಲೇ ಮೀರೋ ಸ್ನೇಹ ನಿನ್ನದು
ನನ್ನ ಲೋಕವೆಲ್ಲ ಬಣ್ಣ ರಂಗು ರಂಗು
ದಿನವೂ ನೀ ತಂದೆ ಮಾಯಾವಿಯ ಜಾದೂ
ನಿನ್ನ ಪ್ರೀತಿಯ ಸುಮಧುರ ಸುನಾಮಿಯು
ಹರಿದೋಡಿಸಿದೆ ಎಲ್ಲಾ ಚಿಂತೆಯೂ
ನಿನ್ನ ಪ್ರೀತಿಯ ಸುನಾಮಿಯು

ನೀನೇ ಬಲವು ನನ್ನ ಗೆಲುವು
ನಿನ್ನ ಒಲವು ನನಗೆ ವರವು
ನಿನ್ನ ಮೌನದಲ್ಲೂ ನೂರು ಸವಿಮಾತು
ಪ್ರತೀ ನೋವಿನಲ್ಲೂ ನೀನೇ ನಗುವು
ನಿನ್ನ ಪ್ರೀತಿಯ ಸುಮಧುರ ಸುನಾಮಿಯು
ಹರಿದೋಡಿಸಿದೆ ಎಲ್ಲಾ ಚಿಂತೆಯೂ
ನಿನ್ನ ಪ್ರೀತಿಯ ಸುನಾಮಿಯು

ಏಕಾಂತದಲ್ಲೂ ಜೊತೆಯಾಗಿ ನಿಂತ
ಸ್ನೇಹ ಕಂಡ ನನ್ನ ಪುಣ್ಯ
ಬಾಳ ಕತ್ತಲಲ್ಲೂ ದಾರಿ ಕಾಣುವಂತೆ
ಬೆಳಕು ಪಡೆದ ನಾ ಧನ್ಯ
ಎಲ್ಲಿದ್ದರೂನೂ ಹೇಗಿದ್ದರೂನೂ
ನನ್ನುಸಿರು ನೀನೇನೆ
ನನಗಾಗಿ ನೀನು ನಿನಗಾಗಿ ನಾನು
ಎಂದೆಂದೂ ಹೀಗೇನೆ
ನಿನ್ನ ಪ್ರೀತಿಯ ಸುಮಧುರ ಸುನಾಮಿಯು
ಹರಿದೋಡಿಸಿದೆ ಎಲ್ಲಾ ಚಿಂತೆಯೂ
ನಿನ್ನ ಪ್ರೀತಿಯ ಸುನಾಮಿಯು



Credits
Writer(s): Raghu Dixit, Raghavendra V Kamath
Lyrics powered by www.musixmatch.com

Link