Kadak Rotti (From "Osho")

ಖಡಕ್ ರೊಟ್ಟಿ ತಿನ್ನೋಳೆ
ಮಂಡಕ್ಕಿ ಮುಗೋಳೇ
ಖಾರ ಪುರಿಯೇ ಸಾವ್ಜಿ ಕರಿಯೇ
ಜೊತೆ ನಡಿಯೇ
ಮುದ್ದೆಯ ರುಚಿ ನೋಡ್ಲಾ
ಮೀನ್ ಸಾರ ತಿನ್ನೋಡ್ಲಾ
ರಾಗಿ ರೊಟ್ಟಿ ಉಚ್ಚೆಳ್ ಚಟ್ನಿ
ಬಡ್ಸ್ ನಡಿಯೇ

ಕುರಿ ಮುಂದೆ ಥರಾ ಹಿಂದೆ ಬೀಳಬ್ಯಾಡ
ಯೋಗ್ರಾಜ್ಭಟ್ಟಂಥರ ಪದ ಹಾಡಬ್ಯಾಡ
ದಚ್ಛ ಕಿಚ್ಚನಂಥರ ಮೈಯ್ಯ ಮುರಿಬ್ಯಾಡ

(ಕುರಿ ಮುಂದೆ ಥರಾ ಹಿಂದೆ ಬೀಳಬ್ಯಾಡ) ಏ ರಾಜಿ
(ಯೋಗ್ರಾಜ್ಭಟ್ಟಂಥರ ಪದ ಹಾಡಬ್ಯಾಡ)
ಕುರಿ ಕಾಯೋ ಕಾಳಿದಾಸ ನಾನೇನೇ (ದಚ್ಛ ಕಿಚ್ಚನಂಥರ ಮೈಯ್ಯ ಮುರಿಬ್ಯಾಡ)

ಈ ಬಿಸಿ ಉಸಿರು ಹರೆಯಕೆ ಒಳಿತಲ್ಲ
ಇಷ್ಟು ಎದೆ ಬಡಿತ ಹೃದಯಕೆ ಬೇಕಿಲ್ಲ
ಹುಡುಗಿ ಒಪ್ಪಿ ಆಲಂಗಿಸು
ನನ್ನ ಹೃದಯ ಇನ್ನು ಎಳೆಸು
ಕೊಡು ಮನಸು
ಏ ರಾಜ
ನನ್ನ ಮೌನದ ಅರ್ಥವೇ ಸಮ್ಮತಿ
ಏ ರಾಜ
ಕೊಟ್ಟಾಯ್ತೋ ಎಂದೋ ನಿನಗೆ ಅನುಮತಿ

ಈ ಧರಣಿಯನು ನಿನ್ನ ದೇಗುಲವ ಮಾಡಲೇ
ಆ ದೇವರನು ನಿನ್ನ ಸೇವೆಗೆಯೇ ಮುಡಿಪಿಡಲೇ
ಪ್ರೀತಿಯ ಜ್ವರಕೆ ಎನೌಷಧಿ
ಏಳೇಳು ಸುತ್ತಿನ ಸಪ್ತಪದಿ
ಬಾ ವರಿಸು

ಖಡಕ್ ರೊಟ್ಟಿ ತಿನ್ನೋಳೆ
ಮಂಡಕ್ಕಿ ಮುಗೋಳೇ
ಖಾರ ಪುರಿಯೇ ಸಾವ್ಜಿ ಕರಿಯೇ
ಜೊತೆ ನಡಿಯೇ
ಮುದ್ದೆಯ ರುಚಿ ನೋಡ್ಲಾ
ಮೀನ್ ಸಾರ ತಿನ್ನೋಡ್ಲಾ
ರಾಗಿ ರೊಟ್ಟಿ ಉಚ್ಚೆಳ್ ಚಟ್ನಿ
ಬಡ್ಸು ನಡಿಯೇ

ಕುರಿ ಮುಂದೆ ಥರಾ ಹಿಂದೆ ಬಿದ್ದಿದ್ದಕ್ಕೆ
ಯೋಗ್ರಾಜ್ಭಟ್ಟಂಥರ ಪದ ಹಾಡಿದಕ್ಕೆ
ದಚ್ಛ ಕಿಚ್ಚನಂಥರ ಮೈಯ್ಯ ಮುರಿದಿದಕ್ಕೆ
ದಕ್ಕಾಯ್ತು
ಸಿಕ್ಕೋಯ್ತು
Set ಆಯ್ತು

ಹೇ ರಾಜ
ಸಾಗರ ಮೋಡದ ಹಾಗೆ ನಮ್ಮ ಈ ಬಂಧ
ಹೇ ರಾಜಿ
ಮಳೆ ಬಿದ್ದು ಭೂಮಿ ತೊಯ್ದರೇನೇ ಚೆಂದ



Credits
Writer(s): Keerthan Shivarama Kedumpadi, Ziaullah Khan
Lyrics powered by www.musixmatch.com

Link