Nagabeda Ande Naanu

ನಾಗಬೇಡ ಅಂದೇ ನಾನು
ನಗುವಲೇ ಕೊಂದೆ ನೀನು
ಹಠಮಾರಿ ಮನ
ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸಾ ತಿರುವಲಿ ಯಾಕೆ ನಿಂತೆ

ನಗಬೇಡ ಅಂದೇ ನಾನು
ನಗುವಲೇ ಕೊಂದೆ ನೀನು
ಹಠಮಾರಿ ಮನ
ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸಾ ತಿರುವಲಿ ಯಾಕೆ ನಿಂತೆ

ಮರುಳನೇ ತುಸು ಮೆಲ್ಲನೆ
ಇರುಳಿಗೂ ಇದೆ ಅವಸರ
ಒಲವಿದು ಸಿಹಿ ಕಲ್ಪನೆ
ಕನಸಿವೆ ಇಲ್ಲಿ ಥರ ಥರ
ಬೇಡುವೆ ಓ ಸಂಪಿಗೆ ಸುಮ್ಮನೆ ನಗು
ಸಂಜೆಯ ತಿಳಿ ತಂಪಿಗೆ ಮಾತಿಗೆ ಸಿಗು
ಅವತರಿಸು ನೀ ಹೀಗೆ
ಪರಿಹರಿಸು ಈ ಬೇಗೆ
ಉಸಿರೇ ನಡುಗುತ ನಾ ಶಿಲೆಯಾದೆ
ಶಿಲೆಯ ಎದೆಯಲಿ ನೀ ಉಸಿರಾದೆ

ತುಂಬಿದ ನಿನ್ನ ಗಲ್ಲಕ್ಕೂ
ಹುಡುಗನಾ ನೆಪ ತಿಳಿದಿದೆ
ಕೊಲ್ಲುವಾ ನಿನ್ನ ಕಣ್ಣಿಗೂ
ನನ್ನದೇ ಗತಿ ಅರಿವಿದೆ
ಹೊಗಳಿಕೆ ನಿನ್ನ ಅಸ್ತ್ರವು ಸೋತಿದೆ ಮನ
ಒಲವಿನ ಈ ಶಾಸ್ತ್ರವು ನಡೆಯಲಿ ದಿನ
ಸಹವಾಸ ಬಲು ಚೆಂದ ಸಹಿಸುವುದೇಗಾಂತ
ಕಲಿಸೂ ದಯವಿಟ್ಟು ಮತ್ತೊಮ್ಮೆ
ವಯಸೂ ಬಲು ಕೇಡಿ ಒಮ್ಮೊಮ್ಮೆ

ನಾಗಬೇಕೇ ಒಮ್ಮೆ ನಾನು
ಬಲಿಯಾಗು ನೀನು
ಹಠವೆಷ್ಟಿದ್ದರೇನು ಗಂಡಲ್ಲವೇ ನೀನು
ಮನದಾ ಮಹಲನು ನೀ ನೀಡಿಲ್ಲಿ
ದಿನಲೂ ಬಿಡಿಸುವೆನು ರಂಗೋಲಿ



Credits
Writer(s): Arjun Lewis, Prasad K Shetty
Lyrics powered by www.musixmatch.com

Link