Nannavale Nannavale

(ಲಕ್ಷ್ಮೀ ಜಯದೇವಿ ಮಮ ಪರಿತಾಪ ಮಧುರೀತಿ
ಇಹಲೋಕ ಶುಭಮೇಹು ವರದೇ
ಲಕ್ಷ್ಮೀ ಜಯದೇವಿ ಮಮ ಪರಿತಾಪ ಮಧುರೀತಿ
ಇಹಲೋಕ ಶುಭಮೇಹು ವರದೇ
ವರದೇ, ವರದೇ)

ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೇ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ

ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ ಸುಂದರಿ ನನ್ನವಳೇ

ತಂಗಾಳಿ ತಬ್ಬಲು ನಾನು ತೆರೆದೆ ಕೈಯನು
ಕಣ್ಬಿಟ್ಟು ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೇ ನಿನ್ನೇ ನೋಡಲು
ನೀನು ನನ್ನ ಒಪ್ಪಲೂ ಒಮ್ಮೆ ಮೆಲ್ಲ ತಬ್ಬಲೂ
ಎಂಥ ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆ ನಾ ಸನಿಹ ರೋಮಾಂಚನ

ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ ಸುಂದರಿ ನನ್ನವಳೇ

ತಿರುಗಿ ನೋಡೇ ನಿನ್ನೊಮ್ಮೆ ನನ್ನ ಸನ್ನೆಯ
ನಿನ್ಗಾಗಿ ಕಟ್ಟುವೆ ನಾನು ಹೊಸ ನಾಳೆಯ
ಗುನುಗುತಿರುವೆ ನಾನು ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ ಒಂದು ಗೂಡಿಸು
ನನ್ನ ಹೊಸ ದಾರಿಯು ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ ನಾನೇ ಬರುತಿರುವೆನೇ
ಇಲ್ಲಿಂದಲೇ ಆಮಂತ್ರಣ ಸನಿಹ ರೋಮಾಂಚನ

ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂಥ ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೇ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ



Credits
Writer(s): Dhananjay Ranjan, Janoop Seelin
Lyrics powered by www.musixmatch.com

Link