Appikondu Nange Jo Laali

ಅಪ್ಪಿಕೊಂಡು ನನ್ಗೆ ಜೋಲಾಲಿ ಹಾಡ್ದೊಳು
ಹರಿದಸೀರೆಯಲ್ಲೂ ಜೋಕಾಲಿ ತಟ್ದೊಳು
ಎದೆಹಾಲು ಕೊಟ್ಟ ಇಂಥ ಅಮ್ಮನ ಬಾಯಿಗೆ
ಎಳ್ಳು ನೀರು ಸುರಿಯೋ ಕರ್ಮ ಬರ್ಬಾರ್ದು ಮಗನಿಗೆ

ಅಮ್ಮ ನೀನೆ ಪ್ರಪಂಚ
ಬೇರೆಯಿಲ್ಲ ಪ್ರಪಂಚ
ಯಾಕಮ್ಮ ಬಿಟ್ಟೋದೇ, ಹೇಳು ಯಾಕಮ್ಮ ಬಿಟ್ಟೋದೇ
ಕಣ್ಣು ಬಿಡದಿದ್ರೆ ನಾನು ಅಳ್ತೀನಿ ಮಗುವಂಗೆ

ನನ್ಗೆ ಸಣ್ಣ ಗಾಯ ಆದ್ರೂ ನೀನು ಅಳ್ತಿದ್ದೆ
ಮೂಗು ಬಾಯೋ ಒರೆಸಿ ಮುದ್ದು ಮಾಡಿ ಹಾಡ್ತಿದ್ದೆ
ಹೆತ್ತೋಳು ಮಲಗಿದ್ದಾಳೆ ಯಾರೂ 'ಏಳಿ' ಅನ್ನಬೇಡಿ
ತುತ್ತು ತಿನಿಸಿದವಳ ಈ ಬಾಯಿಗೆ ಬಟ್ಟೆ ತುರ್ಕಬೇಕಾ
ಹೆತ್ತು ಹೊತ್ತ ದೇವತೆಗೆ ಚಟ್ಟ ಕಟ್ಟಿ ಕಳಿಸಬೇಕಾ
(ಅಮ್ಮಾ)

ಅಮ್ಮಾ ಮಾತಾಡು ಏನಾದರು ಕಥೆ ಆಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನೂ ಆರಿಲ್ಲ, ಒಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ

ಮುದ್ದು ಮಾತು ಕಲಿಸಿದೆ ಅಮ್ಮಾ
ಗೊಂಬೆ ಅಲಂಕಾರ ಮಾಡಿದೆ ಅಮ್ಮಾ
ಈಗ್ಯಾಕೆ ಗೊಂಬೆ ಅಂಗೇ ಮಾತಾಡ್ದೆ ಮಲಗಿದ್ದೀ ಅಮ್ಮಾ
ನೀನು ಮಾತಾಡ್ದೆ ಮಲಗಿದ್ದೀ ಅಮ್ಮಾ

ಯಾರ ಕಣ್ಣು ಬೀಳ್ಬಾರದಂತ ಹಣೆಗೆ ಬೂದಿ ಹಚ್ಚುತ್ತಿದ್ದೆ ನೀನು
ಕಣ್ಣು ಮುಚ್ಚಿಡ್ಕೂಡ್ಲೇ ಸುಡುವ ಬೆಂಕಿ ಇಟ್ಟು
ಬೂದಿಯ ಮಾಡ್ಬೇಕಾ, ಅಮ್ಮಾ ನಿನ್ನ ಬೂದಿಯ ಮಾಡ್ಬೇಕಾ
(ಅಮ್ಮಾ)

ಅಮ್ಮಾ ಮಾತಾಡು ಏನಾದರು ಕಥೆ ಆಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನೂ ಆರಿಲ್ಲ, ಒಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ



Credits
Writer(s): Kalyan K, Ravi Shankar
Lyrics powered by www.musixmatch.com

Link