Haakiro Hejje (From "Neeli Malaya Jeevadodaya")

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಆನಂದದ ಮೂರ್ತಿಯ ನೋಡಲು
ಆನಂದದ ಮೂರ್ತಿಯ ನೋಡಲು

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು

ಮೊದಲನೇ ಮೆಟ್ಟಿಲಲಿ ಜಡಪಾಪ ಕಳೆವನು
ಎರಡನೇ ಮೆಟ್ಟಿಲಲಿ ಪರಿತಾಪ ಕಳೆವನು
ಮೂರನೇ ಮೆಟ್ಟಿಲಿನ ಮೇಲೆ ಶಾಪ ಕಳೆವನು
ನಾಲ್ಕನೇ ಮೆಟ್ಟಿಲಿನ ಮೇಲೆ ಮನಸ ತೊಳೆವನು
ಐದನೇ ಮೆಟ್ಟಿಲ ಮೇಲೆ ಶ್ರಮವ ಕಳೆವನು
ಆರನೇ ಮೆಟ್ಟಿಲ ಮೇಲೆ ಶಕ್ತಿ ಕೊಡುವನು
ಆನಂದದ ಮೂರ್ತಿಯ ನೋಡಲು
ಆನಂದದ ಮೂರ್ತಿಯ ನೋಡಲು

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು

ಏಳನೇ ಮೆಟ್ಟಿಲಲಿ ಮದ-ಮೋಹ ಸುಡುವನು
ಎಂಟನೇ ಮೆಟ್ಟಿಲಲಿ ಕಡುಲೋಹ ಕಳೆವನು
ಒಂಬತ್ತನೇ ಮೆಟ್ಟಿಲ ಮೇಲೆ ಮರೆವ ಕಳೆವನು
ಹತ್ತನೇಯ ಮೆಟ್ಟಿಲ ಮೇಲೆ ಅರಿವು ಕೊಡುವನು
ಹನ್ನೊಂದನೇ ಮೆಟ್ಟಿಲ ಮೇಲೆ ಭಯವ ಕಳೆವನು
ಹನ್ನೆರಡನೇ ಮೆಟ್ಟಿಲ ಮೇಲೆ ಧೈರ್ಯ ಕೊಡುವನು
ಆನಂದದ ಮೂರ್ತಿಯ ನೋಡಲು
ಆನಂದದ ಮೂರ್ತಿಯ ನೋಡಲು

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು

ಹದಿಮೂರನೇ ಮೆಟ್ಟಿಲಲಿ ಒಳಗಣ್ಣ ತೆರೆವನು
ಹದಿನಾಲ್ಕನೇ ಮೆಟ್ಟಿಲಲಿ ಸುಜ್ಞಾನ ಕೊಡುವನು
ಹದಿನೈದನೇ ಮೆಟ್ಟಿಲಲ್ಲಿ ಜಯವ ಕೊಡುವನು
ಹದಿನಾರನೇ ಮೆಟ್ಟಿಲಲ್ಲಿ ವಿಜಯ ಕೊಡುವನು
ಹದಿನೇಳನೇ ಮೆಟ್ಟಿಲಲ್ಲಿ ಕೂಗಿ ಕರೆವನು
ಹದಿನೆಂಟನೇ ಮೆಟ್ಟಿಲಲ್ಲಿ ತಾನೇ ಬರುವನು
ಈ ಕಂಗಳ ಗುಡಿಯಲ್ಲಿ ನಿಲುವನು
ಈ ಕಂಗಳ ಗುಡಿಯಲ್ಲಿ ನಿಲುವನು

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಆನಂದದ ಮೂರ್ತಿಯ ನೋಡಲು
ಆನಂದದ ಮೂರ್ತಿಯ ನೋಡಲು

ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಹಾಕಿರೋ ಹೆಜ್ಜೆ, ಹದಿನೆಂಟು ಮೆಟ್ಟಲೇರಲು
ಭಕ್ತಿಗೊಲಿವ ಪ್ರಭುವ ಸೇರಲು
ಆನಂದದ ಮೂರ್ತಿಯ ನೋಡಲು
ಆನಂದದ ಮೂರ್ತಿಯ ನೋಡಲು



Credits
Writer(s): Hamsalekha
Lyrics powered by www.musixmatch.com

Link