Mugulu Nage Title Track

ಮುಗುಳುನಗೆ ಏನೇ ಹೇಳು
ಮುಗುಳುನಗೆ ಏನೇ ಹೇಳು
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ ತುಟಿಯೇ ಬೇಕೇ ನಿನಗೆ
ನನ್ನೆಲ್ಲ ನೋವಿಗೂ ನಗುವೇ
ನೀ ಏಕೇ ಹೀಗೇ

ಮುಗುಳುನಗೆ ಏನೇ ಹೇಳು
ಮುಗುಳುನಗೆ ಏನೇ ಹೇಳು

ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆ ಮಾಚುವೆ ನನ್ನೆಲ್ಲ ಭಾವುಕತೆ
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೆ
ಅಳುವೊಂದು ಬೇಕು ನನಗೆ
ಅರೆ ಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೇ

ಮುಗುಳುನಗೆ ಏನೇ ಹೇಳು
ಮುಗುಳುನಗೆ ಏನೇ ಹೇಳು
ಯಾರಿದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ

ಕಣ್ಣಾಲಿಯ ಜಲಪಾತವ ಬಂಧಿಸಲು ನೀ ಯಾರು
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು
ಸಂತೋಷಕೂ ಸಂತಾಪಕೂ ಇರಲಿಬಿಡು ಒಂದೇ ಬೇರು
ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ
ಅತ್ತು ಬಿಡು ನನ್ನಾ ಜೊತೆಗೆ ನಗಬೇಡ ಹೀಗೇ

ಮುಗುಳುನಗೆ ಏನೇ ಹೇಳು
ಮುಗುಳುನಗೆ ಏನೇ ಹೇಳು
ಯಾರಿದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ



Credits
Writer(s): V. Harikrishna, Yogaraj Bhat
Lyrics powered by www.musixmatch.com

Link