Guruvara (From "Power")

ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿ ಜಿಂಕೆ
ಬಿದ್ದೆ, ಬಿದ್ದೆ, ಬಿದ್ದೆ, ಏರ್ರಾಬಿರ್ರಿ ಬಿದ್ದೆ
ಖಾಲಿ heart-u deal ಆಗೋಯ್ತು, ನಾನು love ಅಲ್ ಬಿದ್ದೆ
ಸೀದಾ ಸಾದಾ ಇದ್ದೆ, ಉಲ್ಟಾ-ಪಲ್ಟಾ ಆದೆ
ಹೆಂಗೆಂಗ್ ಇದ್ದೆ, ಹೆಂಗಾಗೋದೆ, ಅಯ್ಯೋ, ರಾಮ, ರಾಮ

(ಅಯ್ಯೋ, ಅಯ್ಯೋ, ಪಾಪ, ನೋಡೆ ನೀನು ಸ್ವಲ್ಪ
ಒಳ್ಳೆ ಹುಡುಗ ಅನ್ನಿಸ್ತಾನೆ side ಅಲಿ
ಏನೋ, ಸ್ವಲ್ಪ ಹುಂಬ, ಚೂರೂ ಇಲ್ಲ ಜಂಬ
ನೀನು ಪ್ರೀತಿ ಮಾಡು, ಆಗೋದ್ ಆಗಲಿ)

ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿ ಜಿಂಕೆ

(ಅಯ್ಯೋ, ಅಯ್ಯೋ, ಪಾಪ, ನೋಡೆ ನೀನು ಸ್ವಲ್ಪ
ಒಳ್ಳೆ ಹುಡುಗ ಅನ್ನಿಸ್ತಾನೆ side ಅಲಿ
ಏನೋ, ಸ್ವಲ್ಪ ಹುಂಬ, ಚೂರೂ ಇಲ್ಲ ಜಂಬ
ನೀನು ಪ್ರೀತಿ ಮಾಡು, ಆಗೋದ್ ಆಗಲಿ)

ಜೋರಾಗಿ ಅಳುವ ಕಂದ ಇವಳನ್ನ ಕಂಡಾಗಿಂದ
ಬಾಯ್ತುಂಬಾ ನಗುವ ಚಂದ, ನೋಡೋ, ಗೋವಿಂದ
ರಾತ್ರೀಲಿ ಕಾಣೋ ಚಂದ್ರ ಹಗಲೆಲ್ಲೋ ಕಾಣೆ ಆದ
ಗುಟ್ಟಾಗಿ ಇವ್ಳ ಕೆನ್ನೆಲ್ ಬಚ್ಚಿ ಕೂತ್ಕೊಂಡ
ಹುಣ್ಣಿಮೆ ಹುಟ್ಟೋದೇ ಇವಳ ಕಣ್ಣಲ್ಲೇ
ಬೀಸಿದೆ ತಂಗಾಳಿ ಹೋದಲ್ಲೆ
ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೇ
ಹೆಂಗೆಂಗ್ ಇದ್ದೆ, ಹೆಂಗಾಗೋದೆ, ಅಯ್ಯೋ, ರಾಮ, ರಾಮ

(ಅಯ್ಯೋ, ಅಯ್ಯೋ, ಪಾಪ, ನೋಡೆ ನೀನು ಸ್ವಲ್ಪ
ಒಳ್ಳೆ ಹುಡುಗ ಅನ್ನಿಸ್ತಾನೆ sideಅಲಿ
ಏನೋ, ಸ್ವಲ್ಪ ಹುಂಬ, ಚೂರೂ ಇಲ್ಲ ಜಂಬ
ನೀನು ಪ್ರೀತಿ ಮಾಡು, ಆಗೋದ್ ಆಗಲಿ)

(ಗುರುವಾರ ಸಂಜೆ ನಾ ಹೊರಟಿದ್ದೆ)

Slate ಅಲ್ಲಿ ಆ-ಆ-ಇ-ಈ ಬರ್ಕೊಟ್ಟು ನನ್ನ ಅಮ್ಮ
ತಿದ್ದೋಕೆ ಹೇಳಿದಂತೆ ಅಂದು, ಕೇಳಮ್ಮ
Heart ಅಲ್ಲಿ L-O-V-E ಬರೆದಿಟ್ಟು ಇವ್ಳು ನಂಗೆ
ತಿದ್ದೋಕೆ ಹೇಳಿದ್ದಾಳೆ ಇಲ್ಲೇ ಕಾಣಮ್ಮ

ಕಾಮನಬಿಲ್ಲನ್ನೇ ಕಿತ್ತು ಕೈಯಲ್ಲಿ
ನೀಡುವ ಮಾಯಾವಿ ಈ ಮಳ್ಳಿ
ಮೆಲ್ಲಗೆ ಲೂಟಿ ಆದೆ ನಾನಿಲ್ಲಿ
ಹೆಂಗೆಂಗ್ ಇದ್ದೆ, ಹೆಂಗಾಗೋದೆ, ಅಯ್ಯೋ, ರಾಮ, ರಾಮ

ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿ ಜಿಂಕೆ

(ಅಯ್ಯೋ, ಅಯ್ಯೋ, ಪಾಪ, ನೋಡೆ ನೀನು ಸ್ವಲ್ಪ
ಒಳ್ಳೆ ಹುಡುಗ ಅನ್ನಿಸ್ತಾನೆ sideಅಲಿ
ಏನೋ, ಸ್ವಲ್ಪ ಹುಂಬ, ಚೂರೂ ಇಲ್ಲ ಜಂಬ
ನೀನು ಪ್ರೀತಿ ಮಾಡು, ಆಗೋದ್ ಆಗಲಿ)



Credits
Writer(s): Kaviraj, S.s. Thaman
Lyrics powered by www.musixmatch.com

Link