Utthare Utthare (From "Munirathna Kurukshetra")

ಉತ್ತರೆ, ಉತ್ತರೆ
ಚಂದ ನೀನು ನಕ್ಕರೆ
ಹತ್ತಿರ ಬಂದರೆ, ಇನ್ನು ಚಂದ ಉತ್ತರೆ

ಸುಂದರ ಚಂದಿರ ಸುಕುಮಾರ
ಮುತ್ತಲೇ ಮತ್ತಿನ ಶೃಂಗಾರ
ಏನು ಹರುಷವಿದು

ಹೆಗಲ ಮೇಲೆ ಇಂದ್ರ-ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು
ನಿನಗೆ ಹೇಳಿ ಕೊಡುವವನು

ಉತ್ತರೆ, ಉತ್ತರೆ
ಇಂದು ನಿನ್ನ ಕೈಸೆರೆ

ಹತ್ತಿರ ಬಂದರೆ, ಇನ್ನು ಚಂದ ಉತ್ತರೆ

ಅಂಗವಸ್ತ್ರ ತೇಲುವಂತೆ, ಮೆಲ್ಲ ಬೀಸೋ ಕಳ್ಳ ಗಾಳಿ
ನಲ್ಲ ನಿನ್ನ ಉಸಿರು

ಖಡ್ಗವನ್ನೇ ಬೆವರುವಂತೆ ಮಾಡುವಂತ ಮಿಂಚುಬಳ್ಳಿ
ನಲ್ಲೆ ನಿನ್ನ ನೋಟ

ಧೀಮ್ತನ, ಧೀಮ್ತನ ನರ್ತಿಸಿದೆ
ರೋಮವು ವಿಧ-ವಿಧ ವರ್ತಿಸಿದೆ
ಮೋಹ ಗುರುಚತುರ

ಎದೆಯಮೇರು ಶಿಖರದಲಿ
ವೊರುಗು ಬಾರೆ ಇಂದು ವದನೆ
ಅಧರ ಜೇನ ಸವಿಯುವುದೇ
ಪರಮ ಪುಣ್ಯ ಮಂದಗಮನೆ

ಉತ್ತರೆ, ಉತ್ತರೆ
ಇಂದು ನಿನ್ನ ಕೈಸೆರೆ

ಹತ್ತಿರ ಬಂದರೆ, ಇನ್ನು ಚಂದ ಉತ್ತರೆ

ಹಂಸಕ್ಷೀರ ಹಕ್ಕಿಯಂತೆ, ಅಂತರಂಗದಲ್ಲಿ ಇಳಿದು
ಆಸೆ ಹೀರಿ ಸವಿದೆ

ನಾಗ ಸಂಪಿಗೆಯ ಹಾಗೆ, ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ

ಹೋ, ರಸಿಕನೇ ರಂಗಿನ ರಣಧೀರ
ಮೆಚ್ಚಿದೆ ನಿನ್ನನೆ ಮನಸಾರ
ಪಾರ್ಥವರ ಸುತನೆ

ಜಗದ ವೀರ ಪರಿವಾರ
ನಮದು ಕೇಳೇ ಕಮಲ ಮುಖಿ
ಅಧರ ರಾಣಿ, ಯುವ ರಾಣಿ
ನೀನೆ ತಾನೇ ಹೃದಯ ಸಖಿ

ಉತ್ತರೆ, ಉತ್ತರೆ
ಪಟ್ಟದರಸಿ ಉತ್ತರೆ

ಉತ್ತರೆ, ಉತ್ತರೆ
ಚಂದ ಮುತ್ತನಿತ್ತರೆ



Credits
Writer(s): V. Nagendra Prasad, V. Harikrishna
Lyrics powered by www.musixmatch.com

Link