Shivanandi

(ಶಿವನಂದಿ
ಶಿವನಂದಿ)

ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ
ನಂದಿ

ಢಮ ಢಮರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ
ನಂದಿ

ನಡೆದರೆ ತೇರು, ವೈಭವ ಜೋರು
ತಡೆಯೋರು ಯಾರು, ಆರ್ಭಟ ನೋಡು
ಊರಿಗೆ ಇವನು ಚಿನ್ನದ ಕಲಶ
ಕೃಷ್ಣನ ಕರ್ಣನ ಹೋಲುವ ಮನುಷ
ಸೇನೆಯ ನಿಲ್ಲಿಸೋ ಧೈರ್ಯದ ರಭಸ
ಲಾಲಿಗೆ ಸೋಲುವ ಮಗುವ ಮನಸ

ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ
ನಂದಿ

ಢಮ ಢಮರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ
ನಂದಿ

ಎಂಟೆದೆ ಬಂಟ ಇವನೇನೆ
ತೋಳಿಗೆ ತೋಳು ಕೊಡುತಾನೆ
ಇವನೆಂದರೆ ಶಿವನಿಗೂ ಇಷ್ಟನೇ
ಕಲ್ಲನು ಕರಗಿಸೋ ಭೂಪನೆ
ಶಾಂತಿಯ ಮಂತ್ರವ ಹೇಳ್ತಾನೆ
ಊರಿಗೆ ನೆರಳಾಗಿ ಇರುತಾನೆ
ತೊಡೆ ತಟ್ತೊರ್ಗೆಲ್ಲ, ಜಗಜಟ್ಟಿ ಮಲ್ಲ
ಸಾಮ್ರಾಟ ಇವನು, ಸಾಟಿ ಯಾರಿಲ್ಲ
ಶತ ಕೋಟಿಗೊಬ್ಬ ಹೆಮ್ಮೆಯ ಅರಸ
ಇವನು ನಗಲು ಮಣ್ಣಿಗೂ ಹರುಷ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ

ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ
ನಂದಿ

ಚಿನ್ನಕು ನಾಚಿಕೆ ತರುತಾನೆ
ವಜ್ರದ ವರ್ಚಸ್ ಇವನೇನೆ
ನಂಬಿಕೆಗ್ ಇನ್ನೊಂದು ಹೆಸರೇನೆ
ಬೆವರಲೆ ಬದುಕನು ಕಟ್ತಾನೆ
ಹಸಿವಿಗೆ ತುತ್ತನು ಕೊಡುತಾನೆ
ಪ್ರೀತಿಯ ಪರ್ವತ ಇವನೇನೆ
ಚಾಲುಕ್ಯರ ಛಲವು, ಹೊಯ್ಸಳರ ಬಲವೂ
ಕದಂಬರ ಒಲವು, ಆ ಗಂಗರ ಗುಣವೂ
ಭೂಮಿಗೆ ಇವನು ಮುತ್ತಿನ ಕಣಜ
ದೇವರು ಕೂಡ ಮೆಚ್ಚುವ ಸಹಜ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ

ಹರಿ ಹರಿ ಹರಿ ಮುಗಿಲೆತ್ತರ ಹರಿ ಶಿವನತ್ತಿರ ಮೆರೆಯುವ ನಂದಿ
ನಂದಿ
ಢಮ ಢಮರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ

Credits
Writer(s): Harikrishna V, Kumar P Chethan
Lyrics powered by www.musixmatch.com

Link