Thunta Thatakiye

ತುಂಟ ತಾಟಕಿಯೇ ತಾಟ ತುಂಟಕಿಯೇ

ತುಂಟ ತಾಟಕಿಯೇ ಒಂಟಿ ಶೂರ್ಪನಕಿಯೇ
ಪ್ರೀತಿ ಪಾತಕಿಯೇ ತುಂಬ ಶಾರ್ಪು ಸಖಿಯೇ
ಒಮ್ಮೆ ಪರಚು, ಇನ್ನು ಒಮ್ಮೆ ಪರಚು
ನನ್ನ ಹೆಸರ, ಹೆಂಗೋ ಒಮ್ಮೆ ಕಿರುಚು
ಬರಗೆಟ್ಟ ಪ್ರೇಮಿಯ ಅರ್ದ ಮುಗಿಸು ಅರ್ದ ಉಳಿಸು

ತುಂಟ ತಾಟಕಿಯೇ ಒಂಟಿ ಶೂರ್ಪನಕಿಯೇ
ಪ್ರೀತಿ ಪಾತಕಿಯೇ ತುಂಬ ಶಾರ್ಪು ಸಖಿಯೇ

ಹೇಳಲೇನು ಒಳ್ಳೆ ಸುಳ್ಳು, ಹೊಗಳಬಲ್ಲೆ ಪೂರ್ತಿ ಕೇಳು
ಏನೋ ಒಂದು ಉಲ್ಟ ಹೇಳು, ಸ್ವಲ್ಪ ಗೆದ್ದು ಸ್ವಲ್ಪ ಸೋಲು
ಮುದ್ದು ಮೋಹಿನಿಯೇ, ರೂಪ ರಕ್ಕಸಿಯೇ
ಒಂದಿಷ್ಟು ಹೀಗೆ ಹೇಳುವೆ ನಾನು
ಮಿಕ್ಕಿದ್ದೇನೋ ಮಾಡಿಕೊ ನೀನು, ನಾ ನಾನ ನಾನ...
ಈ ಹಣ್ಣು ಹೃದಯವ ಅರ್ದ ತಿಂದು ಅರ್ದ ಉಳಿಸು

ತುಂಟ ತಾಟಕಿಯೇ ಒಂಟಿ ಶೂರ್ಪನಕಿಯೇ
ಪ್ರೀತಿ ಪಾತಕಿಯೇ ತುಂಬ ಶಾರ್ಪು ಸಖಿಯೇ

ನಿನ್ನೆವರೆಗು ಒಂಟಿ ನಾನು, ಇನ್ನು ಮುಂದೆ ಹೇಗೋ ಏನೋ
ಸ್ವಲ್ಪ ತಾಳು ಮೌನಿ ನಾನು, ಜಾಸ್ತಿ ಸಲುಗೆ ಬೇಕು ಇನ್ನು
ಶುದ್ಧ ಸಂಸಾರಿ, ಅರ್ದ ಸಂಸ್ಕಾರಿ
ನೀ ಕೊಟ್ಟ ಕೈಯಲ್ಲಿ ಮನಸ್ಸು ಇಟ್ಟು
ನಿನ್ನಲ್ಲಿ ನಾನು ನಾನಾಗೊ ಆಸೆ, ಇಷ್ಟಪಟ್ಟಿರುವೆನು
ಬಡಪಾಯಿ ಹೃದಯಕೆ ಹಾಕು ನೀನು ಎಳ್ಳು ನೀರು

ತುಂಟ ತಾಟಕಿಯೇ ಒಂಟಿ ಶೂರ್ಪನಕಿಯೇ
ಪ್ರೀತಿ ಪಾತಕಿಯೇ ತುಂಬ ಶಾರ್ಪು ಸಖಿಯೇ



Credits
Writer(s): Yogaraj Bhat, V Harikrishna
Lyrics powered by www.musixmatch.com

Link