Hogume

ಹೋಗುಮೆ ಹೋಗುಮೆ ಎಲ್ಲಾರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ ಮಾರ್ನವಮಿ ಹಬ್ಬವ ಕಳ್ಕೊಂಡ್ ಬರುಮೆ
ನಂದಿ ಬಟ್ಲು ಕಣ್ಣೋಳೆ
ಬೆಣ್ಣೆ ಕಡೆಯೋ ಊರೊಳೆ
ಪರಪಂಚ ಅಂದ್ರೆ ನೀನೆ ನಂಗೆ
ಆಣೆ ಮಾಡ್ಲ ಕಾವೇರಿ ಮ್ಯಾಗೆ
ಹೋಗುಮೆ ಹೋಗುಮೆ ಎಲ್ಲಾರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ ಮಾರ್ನವಮಿ ಹಬ್ಬವ ಕಳ್ಕೊಂಡ್ ಬರುಮೆ

ನೋಡ್ಬುಡೋ ವಯಸು ಅಲ್ವ ನಂದು
ಕಾಡ್ಬುಡೋ ವಯ್ಸು ಕಾಣೆ ನಿಂದು
ಅಯ್ಯೋ ಬಡ್ಕೊಂತು ಬುಡ್ಬುಡ್ಕೆ ಹಂಗೆ ಮನ್ಸು
ಕನ್ನಡಿ ಕಣ್ಣು ಹೊಡಿತಾವ
ಬಳೆಯೂ ಕೈಯ್ಯ ಎಳಿತಾವ
ಅವ್ಕೂನು ಆಸೆ ನಿನ್ನ ಮೇಲೆ
ನಂಗೂನು ಪ್ರೀತಿ ನಿನ್ನ ಮೇಲೆ
ಚುಂಚುನಗಿರಿಯ ಬೈರೂಮ್ನಾಣೆ

ಹೋಗುಮೆ ಹೋಗುಮೆ ಎಲ್ಲಾರ ಒಂದಪ ಕದ್ದು ಹೋಗುಮೆ
ಬರುಮೆ ಬರುಮೆ ಮಾರ್ನವಮಿ ಹಬ್ಬವ ಕಳ್ಕೊಂಡ್ ಬರುಮೆ

ನಿಲ್ಲುಮೆ ದೂರ ಮರು ದೂರ
ಮಾಡುಮೆ ಪ್ರೀತಿ ಮಾನಸಾರ
ನೀನು ಆಗಲ್ಲ ಅಂದ್ಬುಟ್ರೆ ಎದೆ ಭಾರ
ಆಗುಮೆ ನಾವು ಜೋಡೆತ್ತು
ಅದಕೆ ನೀನು ಕೈ ಎತ್ತು
ಸೂಲ್ಗಿತ್ತಿ ಯಾರು ಹೇಳೇ ನಿಂಗೆ
ಕೈ ಮುಟ್ಟಿ ಶರ್ನು ಮಾಡತೀನ್ ಅವ್ಳ್ಗೆ
ಮೇಲುಕೋಟೆ ಚೆಲುವಣ್ಣನಾಣೆ
ಯಾವೋಳೇ ಯಾವೋಳೇ ಮಲ್ಲಿಗೆ ಹೂವಂಗೆ ಘಮ್ ಅನ್ನೊಳೆ
ಯಾವನೋ ಏನಾರ ಅಂದ್ಕೊಳಿ ಇನ್ಮೇಲೆ ನೀನು ನನ್ನೊಳೆ



Credits
Writer(s): Prasad Nagendra, Harikrishna V
Lyrics powered by www.musixmatch.com

Link