Meredadidhe

(Oh-oh, oh-oh-oh)
(Oh-oh, oh-oh-oh)
Oh (oh-oh, oh-oh-oh) oh-oh
(Oh-oh, oh-oh-oh) oh, whoa-oh, oh, oh, oh, oh

ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲ್ಲಿಲ್ಲದ ಕಳ್ಳ ಸಲಿಗೆ
ಹುಡುಕಾಡಿದೆ ನನ್ನ ನಾನೇ ನನ್ನ ಒಳಗೆ
ನನಗರಿಯದೆ ನಾ ಹೋಗಿರುವೆ ಅವಳ ಬಳಿಗೆ

ವಿಷಯ ಇಷ್ಟೇ, ನಾ ಕಾಣೆಯಾಗಿರುವೆ
ಅದಕೇ ಇಷ್ಟು ಕಂಗಾಲು ಆಗಿರುವೆ
ನಾನೇ ನನಗೇ ಸಿಗುತಿಲ್ಲ, ಅವಳಿಗೆ ಸಿಗುವೆನೇ?

ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ (oh-ah, oh-ah, oh)
Hmm, ಶುರುಮಾಡಿದೆ ಊರಲ್ಲಿಲ್ಲದ ಕಳ್ಳ ಸಲಿಗೆ

(Oh-oh, oh-oh-oh)
(Oh-oh, oh-oh-oh)

ಮರೆತಿರುವೆ ಮೊದಲು ಹೇಗಿದ್ದೆ ನಾ, ಮೊದಲಿಂದ ನಾನು ಹೀಗಿದ್ದೆನಾ?
ಅನಿಸುವುದು ನನಗೆ ನನ ಬಗ್ಗೆಯೇ, ಇರಬಹುದು ನಂಗೆ ಒಳ್ಳೆ ಗುಣ
ಗಾಳಿಗೆ ಸಾವಿರ ಮುತ್ತನು ಕೊಡುವುದು ಕಲಿತೆನು ಏತಕೆ ನಾ?

ಕನ್ನಡಿ ಮುಂದೆ ನಾ ಪೆದ್ದನಂತಿರುವೆ
ಅದಕೇ ಚೂರು ನಾ ಗಡ್ಡ ಬಿಟ್ಟಿರುವೆ
ನಾನೇ ನನ್ನನು ಒಪ್ಪಲ್ಲ, ಅವಳು ಒಪ್ಪುವಳೇ?

(Oh-oh, oh-oh-oh)
(Oh-oh, oh-oh-oh)

ಸರಿಹೋಗಬಹುದು ಉಸಿರಾಟವು ತುಸುಬೇಗ ಅವಳು "ಹೂಂ" ಅಂದರೆ
ಉಳಿಗಾಲವಿಲ್ಲ ಈ ಜೀವಕೆ ಅವಳೊಮ್ಮೆ ನನಗೆ "no" ಅಂದರೆ
ಸಾವಿರದೊಂದನೇ ಯತ್ನವೂ ಸೋತಿದೆ ಪ್ರೇಮ ನಿವೇದನೆಗೆ

ಅವಳೆದುರಲ್ಲಿ ನಾ ಬಚ್ಚನಂತಿರುವೆ
ಯಾತಕೆ ಬೇಕು, ಬಾಯಿ ಮುಚ್ಚಿಕೊಂಡಿರುವೆ
ನಾನೇ ನನ್ನನು ನಂಬಲ್ಲ, ಅವಳು ನಂಬುವಳೇ?

ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ (oh-oh, oh-oh-oh, oh-oh, oh-oh-oh)
ಶುರುಮಾಡಿದೆ ಊರಲ್ಲಿಲ್ಲದ ಕಳ್ಳ ಸಲಿಗೆ (oh-oh, oh-oh-oh, oh-oh, oh-oh-oh)



Credits
Writer(s): Yogaraj Bhat, V Harikrishna
Lyrics powered by www.musixmatch.com

Link