Jaadu Maadidanthe (From "Siddhartha")

ಜಾದು ಮಾಡಿದಂತೆ
ಪಿಸು ಮಾತು ಹಾಡಿದಂತೆ
ಒಂದೇ ಚಿಟಿಕೆಯಲ್ಲಿ ಈಗ ಎಲ್ಲ ಸುಂದರ
ಕನಸೊಂದು ಬಂದಿದೆ ಹತ್ತಿರ, ಹತ್ತಿರ
ನನಗಂತೂ ಬೇಡ ಎಚ್ಚರ, ಎಚ್ಚರ

ಜಾದು ಮಾಡಿದಂತೆ
ಪಿಸು ಮಾತು ಹಾಡಿದಂತೆ

You're the one for me girl (me girl)
You are my diamonds and pearl (and pearl)
You make a wish, my angel
I love you all the way
Love you all the way
Love you all the way
Love you all the way

ಭಾವದ ಬಣ್ಣದಲ್ಲಿ ಕಲ್ಪನ ರೇಖೆಯಿಂದ
ರೂಪಸಿ, ನೀನೀಗ ರೂಪಿಸು ನನ್ನನ್ನೇ
ಆಸೆಯ ಕಾಡಿನಿಂದ ಬೀಸುವ ಗಾಳಿಯಂತೆ
ಗಂಧವೇ ನೀನಾಗಿ ವ್ಯಾಪಿಸು ನನ್ನನ್ನೇ
ಜೊತೆಯಾಗಿ ಹಂಚಿಕೊಳ್ಳುವ ಪ್ರತಿಯೊಂದು ಸಣ್ಣ ಸಂಗತಿ
ನಿಧಿಯಾಗಿ ಇಟ್ಟುಕೊಳ್ಳಲೇ ನಾನೇ
ನಗುವೊಂದೇ ನನ್ನಯ ಉತ್ತರ, ಉತ್ತರ
ನನಗಂತೂ ಬೇಡ ಎಚ್ಚರ, ಎಚ್ಚರ

ಕಣ್ಣನು ಕಟ್ಟಿ ನನ್ನ ಎಲ್ಲಿಯೂ ಬಿಟ್ಟರೂನು
ತಪ್ಪದೇ ನಾ ಬಂದು ಅಪ್ಪುವೆ ನಿನ್ನನ್ನೇ
ಕಾಡುವ ನಿನ್ನ ಮೇಲೆ ತೋರುವೆ ಕೋಪವನ್ನು
ಆದರೂ ಗುಟ್ಟಾಗಿ ಮೆಚ್ಚುವೆ ನಿನ್ನನ್ನೇ
ಕ್ಷಣ ಕೂಡ ಎಲ್ಲೂ ಹೋಗದೇ
ಎದುರಲ್ಲೇ ಕೂತು ನನ್ನಯ
ಮನಸನ್ನೇ ನೋಡು ನಿಟ್ಟಿಸಿ ನೀನೇ
ಕಲಿಯೋಣ ಪ್ರೀತಿಯ ಅಕ್ಷರ, ಅಕ್ಷರ
ನನಗಂತೂ ಬೇಡ ಎಚ್ಚರ, ಎಚ್ಚರ



Credits
Writer(s): Jayanth Kaikini, V Harikrishna
Lyrics powered by www.musixmatch.com

Link