Nee Kotiyali Obbane

(ಹೇ, ಸೋನಾ
Peace of mind in my loveನಾ)

ಯಾತಕೆ ನಿನ್ನನೇ ಬಯಸಿದೆ ಹೃದಯ
ನಿನ್ನಲಿ ಏನಿದೆ ಓ ಮಹರಾಯ
ಮಾಮೂಲಿ ಅಲ್ಲ ನೀನು
ಮನದುಂಬಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಡಿಸುವೆ ನಿನ್ನನೇ

ಇತ್ತೀಚಿಗೆ ಗೊತ್ತಾಗದೆ ನಿಂತು ಬಿಡುವೆ ರಸ್ತೆಯಲಿ
ಕನ್ನಡಿ ಮುಂದೆ ಕಣ್ಣು ಹೊಡೆವೆ ಬಿದ್ದು ಬಿಟ್ನಾ ಪ್ರೀತಿಯಲ್ಲಿ
ಕಣ್ಗಳ ಮಿಂಚು ಹೆಚ್ಚಿಸಿದವನೇ
ಕಲ್ಪನೆಯಲ್ಲಿ ಮುದ್ದಿಸಿದವನೇ
ಮಾಮೂಲಿ ಅಲ್ಲ ನೀನು
ತುಸು ನಾಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಯುವೆನು ನಿನ್ನನೇ

ಸನಿಹವು ಸಲಿಗೆ ಕಲಿಸುತಿರಲು
ಹರೆಯದ ಹಣತೆ ಬೆಳಗುತಿರಲು
ಹರುಷವು ಕುಣಿತವನು ಕಲಿಸಿದೆ
ನಲುಮೆಗೆ ಅಮಲು ಸೇರಿಸಿದವನೇ
ಬೆರಳಿಗೆ ಬೆರಳು ಸೋಕಿಸಿದವನೇ
ನನ್ನನ್ನು ತಬ್ಬು ನೀನು ಕಿವಿ ಕಚ್ಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ಒಬ್ಬನೇ, ಒಬ್ಬನೇ
ನಾ ಮೋಹಿಸುವೆ ನಿನ್ನನೇ



Credits
Writer(s): Yogaraj Bhat, Arjun Janya
Lyrics powered by www.musixmatch.com

Link