Kudi Notada - From "[email protected]"

ಕುಡಿ ನೋಟದ ಕಿಡಿ ಸೋಕಿಸಿ
ಸುಡಬೇಡವೇ ನನ್ನೀಥರ
ತುಸು ಕರುಣೆ ತೋರಿಸು, ಬಡಪಾಯಿಗೆ
ಅತಿಯಾಗಿದೆ ಆಕರ್ಷಣೆ
ಏನಾದರೂ ನೀನೆ ಹೊಣೆ
ಇರಲಾರೆ ಸುಮ್ಮನೆ
ತುಸು ಕರುಣೆ ತೋರಿಸು, ಬಡಪಾಯಿಗೆ

ನನ್ನ ಅಂಗೈಲಿ ನೀಡು ನಿನ್ನ ಅಂಗೈನ
ಭೂಮಿನೇ ಏಳು ಸುತ್ತು ಸುತ್ತೋಣ
ನಿನ್ನ ಮುಂದೆ ಮಂಡಿ ಊರಿ
ನಿನ್ನನ್ನೇ ನೋಡುತ
ಕಳೆವಾಸೆ ಸಂಪೂರ್ಣ ಈ ಜೀವಿತ
ಎದುರಲ್ಲಿ ನೀ ನಿಂತು ನಗುವಾಗ ನಾನಂತೂ ಅಸಹಾಯಕ
ತುಸು ಕರುಣೆ ತೋರಿಸು, ಬಡಪಾಯಿಗೆ

ಸಿದ್ದ ನಾನಿನ್ನು ನೂರು ಸಾರಿ ಸಾಯೋಕೆ
ನಿನ್ನನ್ನು ಒಮ್ಮೆ ಬೇಟಿ ಮಾಡೋಕೆ
ಈ ಜೀವ ಮಣ್ಣಿನಲ್ಲಿ ಮಣ್ಣಾಗಿ ಹೋದರು
ಬಾ ಇಂದು ನೀ ಕೂಗು ನಾ ಹಾಜರು
ನೀ ಮುಂದೆ ಬಂದಾಗ
ಮಾತಿಲ್ಲ ನಾ ಮೂಗ, ಅಸಹಾಯಕ
ತುಸು ಕರುಣೆ ತೋರಿಸು, ಬಡಪಾಯಿಗೆ



Credits
Writer(s): Kaviraj, Arjun Janya
Lyrics powered by www.musixmatch.com

Link