Huttida Ooranu

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ?
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು, ಕೊನೆ bus time-ಆಗಿದೆ
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು
ನಿಂಗಿದು ಬೇಕಿತ್ತಾ, ಮಗನೇ?
ವಾಪಸ್ಸು ಹೊಂಟ್ಹೋಗು, ಶಿವನೇ
Bag-u ಹಿಡಿ, ಸೀದಾ ನಡಿ
Board-u ನೋಡಿ, bus-u ಹಿಡಿ

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ?
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು, ಕೊನೆ bus time-ಆಗಿದೆ

ಬ್ಯಾರೆಲ್ಲೇ ಇದ್ದರು ಇದ್ದೂ ಸತ್ತಂಗೆ
ಊರಲ್ಲೇ ನಿನ್ನ ಉಸಿರಿದೆ
ನಿನ್ನೂರ ನಡುವಿನ ಆಲದ ಮರದಲಿ
ನೀ ಕೆತ್ತಿ ಬಂದ ಹೆಸರಿದೆ
ಕಿತ್ತ್ಹೋದ ಕಾಸಿಗೆ, ಕಿತ್ತಾಡೋ ಕೀರ್ತಿಗೆ
Highway-ಲಿ ಲಾರಿ ಹಿಡಿದು ನೀ ಬಂದೆ
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ
ಸಂಕ್ರಾಂತಿ ಹೂವಿನಂತೆ ನೀನಾದೆ
ಹಬ್ಬಕ್ಕೆ ಹಳೆ ಹುಡುಗಿ ಬರುತಾಳೋ
ಮಗನಿಗೆ ನಿನ್ನ ಹೆಸರ್ ಇಟ್ಟಾಳೋ
ಈ ಬಾರಿ ಒಳ್ಳೆ ಫಸಲಂತೆ, ಅತ್ತಿಗೆ ತಿರಗಾ ಬಸಿರಂತೆ
ನಿಮ್ ಮಾವ election ಗೆದ್ನಂತೆ, ದೊಡ್ಡಪ್ಪ cigerette ಬಿಟ್ನಂತೆ
ಅತ್ತೆಯ ಮಗಳು ಓದ್ತಾಳೋ, ಆಗಾಗ ನಿನ್ನ ಕೇಳ್ತಾಳೋ
ನಿಂಗೂ demand ಇದೆ, ಮಗನೇ
ವಾಪಸ್ಸು ಹೊಂಟ್ಹೋಗು, ಶಿವನೇ
Bag-u ಹಿಡಿ, ಸೀದಾ ನಡಿ
Board-u ನೋಡಿ, bus-u ಹಿಡಿ

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ?
ಮಾಡೋದೆಲ್ಲ ಮಾಡಿ ಅಳಬೇಡ ಪರದೇಸಿ
ಎದ್ದೇಳು, ಕೊನೆ bus time-ಆಗಿದೆ

ಇದ್ದಕ್ಕಿದ್ದಂತೇಯೇ ಏನೇನೋ ಅನ್ನಿಸಿ
ಕಣ್ಣು ತುಂಬಿಕೊಳ್ಳೋದ್ಯಾಕೆ?
ಅಪ್ಪ ಅಮ್ಮ ಇಬ್ರೂ ಹತ್ರ ಕುಂತುಕೊಂಡು
ಅಳಬ್ಯಾಡ ಅಂದ್ಹಂಗ್ ಆಗೋದ್ಯಾಕೆ?
ದಿಕ್ಕುಗೆಟ್ಟವನು ಕಾಲಿದ್ದೂ ಹೆಳವ
ಎತ್ಲಾಗೇ ಹೋದರೂ ಒಂದೇ ನೀನು
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು
ದೂರ್ಬೀನು ಹಾಕಿಕೊಂಡು ನಿನ್ನೇ ನೀನು
ಚಡ್ಡಿದೋಸ್ತ್ ಎಲ್ಲ ನಿನ್ನ ಬೈತಾರೆ
ಪಕ್ಕದ ಮನೆ ಹುಡುಗಿ ಕಾಯ್ತಾಳೆ
ಕಲಿಸಿದ ಮೇಷ್ಟ್ರು ಹೋಗ್ಬಿಟ್ರು, ಮುತ್ತಜ್ಜನ ಮನೆ ಮಾರ್ಬಿಟ್ರು
ತಂಗಿಯ ಗಂಡ loss-ಆಗ ಹೋದ, ಅಣ್ಣನ್ಗೆ ಕಾಯಿಲೆ ಮೊನ್ನೆಯಿಂದ
ಅಪ್ಪನ್ಗೆ ಉಸಿರೇ ಸಾಕಾಗಿದೆ, ಅವ್ವನ್ಗೆ ನೆನಪೇ ನಿಂತ್ ಹೋಗಿದೆ
Condition ಹಿಂಗ್ ಇದೆ, ಮಗನೇ
ವಾಪಸ್ಸು ಹೊಂಟ್ಹೋಗು, ಶಿವನೇ
Bag-u ಹಿಡಿ, ಸೀದಾ ನಡಿ
ಕಣ್ಣೊರೆಸಿ bus-u ಹಿಡಿ
Bag-u ಹಿಡಿ, ಸೀದಾ ನಡಿ
ಕಣ್ಣೊರೆಸಿ bus-u ಹಿಡಿ



Credits
Writer(s): Veer Samarth, Yogaraj R Bhatt
Lyrics powered by www.musixmatch.com

Link