Oho Chenne (From "Sparsha")

ಒಹೋ ಹೋ ಹೋ ಚೆನ್ನೇ ಚೆನ್ನೇ
ಒಹೋ ಹೋ ಹೋ ಚೆಲುವೆ, ಚೆಲುವೆ
ನೀನು ಬಂದು ನಿಂತಾಗ
ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ
ನಿಂತಲ್ಲೆಲ್ಲಾ ತಕಧಿಮಿತಾ

ನಿನ್ನ ಹಾಡಿಹಾಗಿ ಓಡಿ ಬಂದು ನಿಂತೆ ನಾ
ಒಹೋ ಹೋ ಹೋ ಚಿನ್ನಾ ಚಿನ್ನಾ
ಒಹೋ ಹೋ ಹೋ ಚಲುವಾ ಚಲುವ
ಅಂದು ನಿನ್ನ ಕಂಡಾಗ
ಬಂತು ಒಂದು ಹೊಸ ರಾಗ
ಇಂದು ಎದುರು ಬಂದಾಗ
ತಂತು ರಾಗ ಅನುರಾಗ

ಇನ್ನು ತಾರೆ ಬಾರೇ ತಾರೆ ತಾರೆ ಪ್ರೇಮ ಧಾರೆಯ
ಒಹೋ ಹೋ ಹೋ ಚೆನ್ನೇ ಚೆನ್ನೇ
ಒಹೋ ಹೋ ಹೋ ಚೆಲುವೆ, ಚೆಲುವೆ

ಬಾನಿನ ಆಚೆ ಇರುವುದು ಒಂದು ಲೋಕ
ಪ್ರೇತಿಯೊಂದೇ ಅಲ್ಲಿ ನಮಗಲ್ಲಿ ಯುಗ ಯುಗಗಳ ತನಕ
ಪ್ರೇಮಕೆ ಪ್ರೇಮ ಅರಳುವ ತಾಣದಲ್ಲಿ
ಮಳೆಯ ಬಿಲ್ಲ ಮನೆಯ ಮಾಡಿರಲು ಹಾರೋಣವೇ ಅಲ್ಲಿ
ಬಾರೆ ಬಾರೆ ತೇರನೇರಿ ಲೋಕಾದಾಚೆ ಸಾಗೋಣ
ಒಹೋ ಹೋ ಹೋ ಚೆನ್ನೇ ಚೆನ್ನೇ
ಒಹೋ ಹೋ ಹೋ ಚೆಲುವೆ, ಚೆಲುವೆ

ಕನಸಲೂ ಕೂಡ ಕಾಯುವೇ ನಿನ್ನ ಪ್ರೀತಿ
ಕನಸಿನಲ್ಲೂ ಕೂಡ ನಿನ್ನ ಪ್ರೀತಿ ಕನಸಾಗದೆ ಇರಲಿ
ನೀನಿರದೇನೆ ನಾನಿರಲಾರೆ ಎಂದೆ
ಜನುಮ ಜನುಮದಲ್ಲೂ ಜೊತೆಗಿರಲು ಈ ಜನುಮವ ಪಡೆದೆ
ನಮ್ಮ ಜೀವ ಜೀವ ಒಂದೇ ಜೀವ ನೂರು ಜನ್ಮಕ್ಕೂ

ಒಹೋ ಹೋ ಹೋ ಚೆನ್ನೇ ಚೆನ್ನೇ
ಒಹೋ ಹೋ ಹೋ ಚಲುವ ಚಲುವ
ನೀನು ಬಂದು ನಿಂತಾಗ
ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ
ನಿಂತಲ್ಲೆಲ್ಲಾ ತಕಧಿಮಿತಾ
ಇನ್ನು ತಾರೆ ಬಾರೇ ತಾರೆ ತಾರೆ ಪ್ರೇಮ ಧಾರೆಯ
ಒಹೋ ಹೋ ಹೋ ಚೆನ್ನೇ ಚೆನ್ನೇ
ಒಹೋ ಹೋ ಹೋ ಚಲುವ ಚಲುವ



Credits
Writer(s): Hamsalekha
Lyrics powered by www.musixmatch.com

Link