Nee Parichaya

ನೀ ಪರಿಚಯ ಹೇಳದೇ
ಸೆಳೆದೇ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ
ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ

ಈ ಬದುಕಿನ ಸೌಖ್ಯವು
ಅಡಗಿ ನಿನ್ನ ಕಣ್ಣಲ್ಲಿದೆ
ಈ ಮಧುರ ಸಾಂಗತ್ಯವು
ಮನದ ಹೆಜ್ಜೆ ಗುರುತಾಗಿದೆ
ಅರೋಳೋ ಪ್ರತಿ ಆರಂಭಕ್ಕೂ
ಹೊಸೆವ ಕಥೆ ನೂರಾಗಿದೆ

ನೀನಿಲ್ಲದೆ ಬೇರೆ ಗಮನಾನೇ ಇಲ್ಲ
ಒಲವಾಗಿದೆ ಬೇರೆ ಸಂದೇಹವಿಲ್ಲ
ಈ ಭಾವಲೋಕದ ಒಪ್ಪಂದವೆಲ್ಲ
ನಿಯಮಾನುಸಾರಕ್ಕೆ ಸಂಭಂಧಿಸಿಲ್ಲ
ನಾ ಬದುಕುವ ಆಸೆಗೆ
ಹುರುಪು ಈಗ ಬಂದಂತಿದೆ
ಈ ಕನಸಿನಾಕಾಶಕ್ಕೆ
ಹೊಳಪು ನೀನೇ ತಂದಂತಿದೆ

ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾಳಲ್ಲಿ
ಹೊಸದಾಗಿ ಸುಳಿದು ತಂಗಾಳಿ
ಬದಲಾಗಿದೆ ಲೋಕವೇ
ಒಂದಾಗಲು ಸಾಲದೇ

ನೀ ಪರಿಚಯ ಹೇಳದೇ
ಸೆಳೆದೇ ಉಸಿರನು ಮೆಲ್ಲಗೆ
ನಾ ಹೊರಟರೂ ಎಲ್ಲಿಗೆ
ತಲುಪೋ ತಾಣ ನಿನ್ನಲ್ಲಿದೆ
ಬಿಸಿಲ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ



Credits
Writer(s): Raghu Dixit, Vasuki Vaibhav
Lyrics powered by www.musixmatch.com

Link