Vismaya

ಹುಡುಕಾಟ ಹುಡುಕಾಟ
ನೀ ನನ್ನ ಜೊತೆಗಿರದೆ
ಪ್ರತಿ ನಿಮಿಷ ನರಳುತಿಹೆ
ಕಣ್ಮುಂದೆ ನೀನಿರದೆ

ಹುಡುಕಾಟ ಹುಡುಕಾಟ
ನೀ ನನ್ನ ಜೊತೆಗಿರದೆ
ಪ್ರತಿ ನಿಮಿಷ ನರಳುತಿಹೆ
ಕಣ್ಮುಂದೆ ನೀನಿರದೆ

ನೀ ಗಂಧ ನಾ ಗಾಳಿ
ವಿಸ್ಮಯ ನಮ್ಮ ಈ ಕಥೆ
ನಾ ಸಿದ್ಧ ಪ್ರತಿ ಬಾರಿ
ಸೋಲಲು ನಿನ್ನ ಗೆಲ್ಲೋಕೆ

ಕೇಳಿಸಿತೇ ನನ್ನ ಈ ಹಾಡು
ಒಂದು ಸಾರಿ ನೋಡು ನನ್ನ ಪಾಡು
ನೀ ದೂರವಾದ ನಂತರ ನಾನೊಂಥರ
ಬದಲಾದೆ

ಕೇಳಿಸಿತೇ ನನ್ನ ಈ ಹಾಡು
ಒಂದು ಸಾರಿ ನೋಡು ನನ್ನ ಪಾಡು
ನೀ ದೂರವಾದ ನಂತರ ನಾನೊಂಥರ
ಬದಲಾದೆ

ಹೃದಯದಿ ನಡೆದಿದೆ
ನಿನ್ನ ನೆನಪಿನ ಮೆರವಣಿಗೆ
ಬೇಕಿದೆ ಜೀವಕೆ
ನಿನ್ನ ಆಸರೆ ಕೊನೆವರೆಗೆ

ಆಪಾದನೆ ಇವೆ ಹಲವು
ನಾ ಶರಣು ನಿನ್ನ ಎದುರು
ಹಠಮಾರಿ ನನ್ನ ಪದಗಳು
ನಿನ್ನ ಹುಡುಕಿವೆ ಎಷ್ಟೇ ತಡೆದರೂ

ನೀ ಸ್ಪರ್ಶ ನೀ ತಂಪು
ನನ್ನೊಳಗಿರೋ ಸುಡುವ ಬಿಸಿಲಿಗೆ
ನಿನ್ನ ಮಾತು ಸಿಹಿ ಜೇನು
ನಾ ದುಂಬಿ ನಿನ್ನ ಹೀರೋಕೆ

ಕೇಳಿಸಿತೇ ನನ್ನ ಈ ಹಾಡು
ಒಂದು ಸಾರಿ ನೋಡು ನನ್ನ ಪಾಡು
ನೀ ದೂರವಾದ ನಂತರ ನಾನೊಂಥರ
ಬದಲಾದೆ

ಕೇಳಿಸಿತೇ ನನ್ನ ಈ ಹಾಡು
ಒಂದು ಸಾರಿ ನೋಡು ನನ್ನ ಪಾಡು
ನೀ ದೂರವಾದ ನಂತರ ನಾನೊಂಥರ
ಬದಲಾದೆ



Credits
Writer(s): Rohit Shetty
Lyrics powered by www.musixmatch.com

Link